ಕನ್ನಡ ಚಿತ್ರರಂಗದ ಮೇರು ನಟ. ಅಭಿಮಾನಿಗಳಿಗೆ ಪ್ರೀತಿಯ ದಾದಾ. ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ. ಕಾನೂನಿನ ಪ್ರಕಾರವೇ ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಆಗಿದೆ ಅಂತ ಹಿರಿಯ ನಟ ರಂಗಾಯಣ ರಘು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅವರ ಸಮಾಧಿ ಇತ್ತು. ಅದು ಅಭಿಮಾನಿಗಳಿಗೆ ಪುಣ್ಯಸ್ಥಳವಂತಿತ್ತು. ಅವರ ನೆನಪಿಗಾಗಿ ಪ್ರತಿ ವರ್ಷ...