ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಂತೆಯೇ, ನಗರವಾಸಿಗಳ ಮನಗಳಲ್ಲಿ ಭಾವನಾತ್ಮಕ ಕ್ಷಣವೂ ಮೂಡಿತು. ಕಳೆದ ಎರಡು ತಿಂಗಳುಗಳ ಕಾಲ ಮೈಸೂರಿನ ಅರಮನೆ ಆವರಣದಲ್ಲಿ ನೆಲೆಸಿದ್ದ ಗಜಪಡೆಗೆ ಸಾಂಪ್ರದಾಯಿಕ ರೀತಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು. ಬೆಳಗಿನ ತಂಪಾದ ಗಾಳಿ, ಅರಮನೆಯ ಗಂಭೀರ ಸೌಂದರ್ಯ ಮತ್ತು ಆನೆಗಳ ಭವ್ಯ ಹಾಜರಾತಿ, ಈ ಎಲ್ಲವು ಸೇರಿ ವಿದಾಯ ಸಮಾರಂಭಕ್ಕೆ...
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಗೆ ಬೀಳ್ಕೊಡುಗೆ ನೀಡಲಾಗಿದೆ. ಜಂಬೂಸವಾರಿಗೆಂದು ಮೈಸೂರಿಗೆ ಬಂದಿದ್ದ ಗಜಪಡೆ ಕಾಡಿನತ್ತ ಹೊರಟಿದೆ. ಅರಮನೆ ಆವರಣದಲ್ಲಿ ಆನೆಗಳಿಗೆ ಬೀಳ್ಕೊಡುಗೆ ನೀಡಲಾಗಿದ್ದು, ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗಿದೆ.
14 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಹಣ್ಣು ತಿನ್ನಿಸಲಾಯಿತು. ಎಲ್ಲ ಆನೆಗಳು ಏಕಕಾಲಕ್ಕೆ ಸೊಂಡಿಲನ್ನೆತ್ತಿ...
ಇದೇ ಮೊದಲು ಬಾರಿಗೆ ದಸರಾಗೆ ಆಗಮಿಸಿರುವ ಹೆಣ್ಣಾನೆಗಳಾದ ರೂಪ, ಹೇಮಾವತಿ ಮತ್ತು ಗಂಡಾನೆ ಶ್ರೀಕಂಠನಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ.
ಸಾಮಾನ್ಯವಾಗಿ ದಸರಾಗೆ ಮೊದಲ ಬಾರಿಗೆ ಆಗಮಿಸಿದ ಹೊಸ ಆನೆಗಳನ್ನು ಜಂಬೂ ಸವಾರಿ ಮೆರವಣಿಗೆಗೆ ಬಳಕೆ ಮಾಡುವುದಿಲ್ಲ. ಈ ಆನೆಗಳೇ ಮುಂದಿನ ವರ್ಷದ ದಸರಾಗೆ ಆಗಮಿಸಿದರೆ ಆಗ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ...