ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು, ಶವವಾಗಿ ಪತ್ತೆಯಾಗಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯದಲ್ಲಿ ಘಟನೆ ನಡೆದಿದೆ. ಈಶ್ವರ್ ರಾವ್ ಪುತ್ರಿ ಚೈತ್ರಾ ಬಾಯಿ ಮತ್ತು ರಾಘವೇಂದ್ರ ರಾವ್ ಸಾಕು ಮಗಳು ಧನ್ಯಾಬಾಯಿ, ಯಳಚೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 7ನೇ ತರಗತಿಯಲ್ಲಿ ಓದುತ್ತಿದ್ರು.
ಅಕ್ಟೋಬರ್ 2ರಂದು ಮನೆ ಎದುರು ಆಟವಾಡುತ್ತಿದ್ದರು. ಹೊರಗೆ ಶೌಚಾಲಯಕ್ಕೆ ಹೋಗಿ ಬರುವುದಾಗಿ...