ನವದೆಹಲಿ: ಈ ಸಾಲಿನ ಬಜೆಟ್ ನಲ್ಲಿ ಕೇಂದ್ರ ಚಿನ್ನ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದು ಈಗಾಗಲೇ ಆಕಾಶಕ್ಕೇರಿರೋ ಹಳದಿ ಲೋಹ ಮಧ್ಯಮವರ್ಗದವರಿಗೆ ನಿಲುಕದ ನಕ್ಷತ್ರವಾಗಲಿದೆ.
ಚಿನ್ನ, ಬೆಳ್ಳಿ, ಪ್ಲಾಟಿನಮ್ ಸೇರಿದಂತೆ ಇತರೆ ಬೆಲೆಬಾಳುವ ಲೋಹಗಳ ಮೇಲೆ ಆಮದು ಸುಂಕವನ್ನು ಏರಿಕೆ ಮಾಡಲಾಗಿದೆ. ಇದೀಗ ಶೇ 10ರಷ್ಟಿರುವ ಚಿನ್ನದ ಆಮದು ಸುಂಕವನ್ನು ಶೇ 12.5ಕ್ಕೆ ಏರಿಕೆ...