ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ, ತಾಯಿಯೊಬ್ಬರು ಹೆಣವಾಗಿದ್ದಾರೆ. ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಈ ಭೀಕರ ಘಟನೆ ನಡೆದಿದೆ. 32 ವರ್ಷದ ಅಳಿಯ ರಸುಲ್ಲಾ, 58 ವರ್ಷದ ಅತ್ತೆ ಫೈರೋಜಾರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ರಸುಲ್ಲಾ ಮತ್ತು ಶೆಮಿನಾ ಭಾನು, 10 ವರ್ಷಗಳ ಹಿಂದೆ ಮದುವೆಯಾಗಿದ್ರು. ಮದುವೆಯಾಗಿ ದಶಕ ಕಳೆದರೂ ಮಕ್ಕಳು ಇರ್ಲಿಲ್ಲ. ಇದರಿಂದ ರಸುಲ್ಲಾ ತನ್ನ...
ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನೋ ಗಾದೆ ಮಾತಿನಂತೆ, ಹಲವು ಸರ್ಕಾರಿ ಅಧಿಕಾರಿಗಳಿಗೆ ಲಂಚ ತೆಗೆದುಕೊಳ್ಳುವ ದುರ್ಬದ್ಧಿ ಎಂದಿಗೂ ಹೋಗಲ್ಲ ಅನ್ಸತ್ತೆ. ಸರ್ಕಾರದ ಸಂಬಳ ತೆಗೆದುಕೊಳ್ತಿದ್ರೂ, ಸಾರ್ವಜನಿಕರ ಕೆಲಸ ಮಾಡಿಕೊಡಲು ಕೈಚಾಚುತ್ತಲೇ ಇರ್ತಾರೆ.
ಹಾಸನದಲ್ಲೂ ಇಂಥದ್ದೇ ಘಟನೆ ನಡೆದಿದ್ದು, ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ನಗರದ ಎನ್.ಆರ್.ವೃತ್ತದಲ್ಲಿರುವ ಪಂಚಾಯತ್ ರಾಜ್ ಎಂಜಿನಿಯರಿಂಗ್...
ಕೇಂದ್ರ ಸರ್ಕಾರದ ಯೋಜನೆಯೊಂದ್ರಲ್ಲಿ, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆಯಂತೆ. ಶಾಸಕ ಸಿಮೆಂಟ್ ಮಂಜು ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಬರೋಬ್ಬರಿ 3 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆಯಂತೆ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
ಜಿಲ್ಲಾ ವಸತಿ ನೋಡಲ್ ಅಧಿಕಾರಿ ಕೆ.ಎಂ. ರಾಜೇಶ್ ಅಕ್ರಮ ಎಸಗಿದ್ದು,...
ಹಾಸನ ನಗರದಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ, ಅಂತೂ ಇಂತೂ ಅಂತಿಮ ಹಂತ ಮುಟ್ಟಿದೆ. ಕಳೆದ 7 ವರ್ಷದಿಂದ ಆಮೆವೇಗದಲ್ಲಿ ಸಾಗಿದ್ದ ಕಾಮಗಾರಿ, 2025ರ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಎನ್.ಆರ್. ವೃತ್ತ ಹಾಗೂ ಹೊಸ ಬಸ್ ನಿಲ್ದಾಣದ ನಡುವೆ, 98 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ರೈಲ್ವೆ ಮೇಲ್ಸೇತುವೆ ಮತ್ತೊಂದು ಭಾಗದ ಕಾಮಗಾರಿ ಅನುದಾನದ...
ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರೂ, ಬೆಳಕಿನ ಭಾಗ್ಯವೇ ಇಲ್ಲ. ನಗರದಲ್ಲಿ ಬರೋಬ್ಬರಿ 2 ಕೋಟಿ ವೆಚ್ಚದಲ್ಲಿ, 2 ಸಾವಿರ ಎಲ್‌ಇಡಿ ಬಲ್ಬ್ ಅಳವಡಿಸಲಾಗಿತ್ತು. ನಗರೋತ್ಥಾನ ಯೋಜನೆ ಅನ್ವಯ, 2023-24ನೇ ಸಾಲಿನಲ್ಲಿ, ಬೀದಿದೀಪ ಅಳವಡಿಸಲಾಗಿತ್ತು. ಆದ್ರೀಗ ಶೇಕಡ 80ರಷ್ಟು ದೀಪಗಳು ಉರಿಯುತ್ತಲೇ ಇಲ್ಲ. ಜನರು ಕತ್ತಲೆಯಲ್ಲೇ ಇರಬೇಕಾಗಿದೆ. ಕಳಪೆ ಕೆಲಸ...
ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಉತ್ಸವದ ಕೂಗು ಜೋರಾಗಿದೆ. ವಿಶ್ವವಿಖ್ಯಾತ ಹಂಪಿ ಉತ್ಸವ , ಚಿತ್ರದುರ್ಗದಲ್ಲಿ ಕರುನಾಡ ಉತ್ಸವ ಸೇರಿದಂತೆ, ಹಲವು ಜಿಲ್ಲೆಗಳಲ್ಲಿ ಉತ್ಸವಗಳು ನಡೀತಿವೆ. ಆದರೆ, ಕಳೆದ 8 ವರ್ಷಗಳಿಂದ ಹೊಯ್ಸಳ ಉತ್ಸವ ಮಾಡದೇ, ಹಾಸನ ಜಿಲ್ಲಾಡಳಿತ, ಸರ್ಕಾರ ಬೇಲೂರಿನಲ್ಲಿ ನಿರ್ಲಕ್ಷ್ಯ ವಹಿಸಿದೆ.
ಶಿಲ್ಪಕಲೆಗಳ ತವರೂರು ಬೇಲೂರು, ಹಳೇಬೀಡು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡ ಸಂಭ್ರಮದಲ್ಲಿಯಾದ್ರೂ, ಹೊಯ್ಸಳ...
ಹಾಸನ ಜಿಲ್ಲೆಯ ಹಳೇಬೀಡು ಭಾಗದಲ್ಲಿ, ಶುಂಠಿ ಬೆಳೆಗೆ ರೋಗ ಹರಡುತ್ತಿದೆ. ಗಿಡಗಳಲ್ಲಿ ಬಿಳಿ ಸುಳಿ ಕಾಣಿಸಿಕೊಂಡಿದ್ದು, ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುತ್ತಿವೆ. ಬೆಂಕಿ ಬೆಳೆ ರೋಗದಿಂದಲೂ ಶುಂಠಿ ಬೆಳೆ ಹಾಳಾಗ್ತಿದೆ.
ಸಾಲ ಮಾಡಿ ಶುಂಠಿ ಬೆಳೆ ಹಾಕಿದ್ದಾಯ್ತು. ಕೈ ತುಂಬಾ ಹಣ ಗಳಿಸಿ, ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಲು ಹೊರಟ ರೈತರು ಕಂಗಾಲಾಗಿದ್ದಾರೆ. ರಾಜಗೆರೆ ಗ್ರಾಮದ ರೈತರು...
ಧರ್ಮಸ್ಥಳದ ಜೊತೆ ನಾವಿದ್ದೇವೆ ಅನ್ನೋ ಸಂದೇಶ ಸಾರಲು, ದೋಸ್ತಿ ಪಕ್ಷಗಳು ಶ್ರೀಕ್ಷೇತ್ರಕ್ಕೆ ಸಾಲು ಸಾಲು ಯಾತ್ರೆ ಕೈಗೊಳ್ಳುತ್ತಿದ್ದಾರೆ. ಧರ್ಮಸ್ಥಳ ಚಲೋ ಹೆಸರಲ್ಲಿ ಬಿಜೆಪಿ ಯಾತ್ರೆ ಮಾಡಿದ್ರೆ, ಸತ್ಯ ಯಾತ್ರೆ ಹೆಸರಲ್ಲಿ ಧರ್ಮಸ್ಥಳಕ್ಕೆ ಜೆಡಿಎಸ್ ನಿಯೋಗ ಎಂಟ್ರಿ ಕೊಟ್ಟಿತ್ತು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ, ಹಾಸನದಿಂದ ಯಾತ್ರೆ ಕೈಗೊಳ್ಳಲಾಗಿದೆ. ನಗರದ ಹೊರವಲಯದ ಕಂದಲಿಯಿಂದ...
ಅರಸೀಕೆರೆಯಲ್ಲಿ ಜೆಡಿಎಸ್ ವಿರುದ್ಧ ಶಾಸಕ ಕೆ.ಎಂ ಶಿವಲಿಂಗೇಗೌಡರು ಸಮರ ಸಾರಿದ್ದಾರೆ. ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಶಿವಲಿಂಗೇಗೌಡ್ರು ಹೇಳಿದ್ದಾರೆ. ವಸತಿ ಯೋಜನೆ ಅನುಷ್ಠಾನದ ವೇಳೆ ನಡೆದಿರುವ ಹಗರಣದಲ್ಲಿ ನನ್ನ ಹಸ್ತಕ್ಷೇಪವಿದೆ ಎಂದು ಆರೋಪಿಸಲಾಗಿದೆ. ಇದು ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಸೆಪ್ಟಂಬರ್ 1ರಂದು ರಾಜ್ಯ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸುತೇನೆಂದು...
ಪ್ರಖ್ಯಾತ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಉತ್ಸವ ನಡೀತಿದೆ. ಮೊದಲ ಹಾಗೂ ಕೊನೆ ದಿನ ಹೊರತುಪಡಿಸಿ, ಉಳಿದ 13 ದಿನಗಳ ಕಾಲ ಭಕ್ತರಿಗೆ, ಹಾಸನಾಂಬೆ ದರ್ಶನ ನೀಡಲಿದ್ದಾರೆ.
ಆದರೆ ಈ ಬಾರಿ ದರ್ಶನದ ಪಾಸ್ ವ್ಯವಸ್ಥೆಯನ್ನು, ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಬದಲಾಗಿ ಗೋಲ್ಡ್ ಕಾರ್ಡ್ ನೀಡಲಾಗ್ತಿದೆ. 1 ಗೋಲ್ಡ್...