ಬೆಂಗಳೂರು: ʻʻತೇರನೆಳೆಯುತ್ತಾರೆ ತಂಗಿ…ತೇರನೇಳೆಯುತ್ತಾರೆ… ನೋಡಲಿಕ್ಕೆ ಹೋಗುಣ ಬಾರೆ”.. ಎಂದು ಸಂತ ಶಿಶುವನಾಳ ಶರಿಫರು ಹಾಡಿದ ರೀತಿಯಲ್ಲಿ ನಾವು ಇಂದು ಕನ್ನಡದ ತೇರು ಎಳೆಯುತ್ತಿದ್ದೇವೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಈ ಕನ್ನಡದ ತೇರು ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತು ನಾಡಿನಾದ್ಯಂತ ಸಂಚರಿಸಿ, ಕನ್ನಡದ ಮನಸ್ಸುಗಳನ್ನು ಒಟ್ಟುಗೂಡಿಸಿ, ಕನ್ನಡದ ನುಡಿ ಜಾತ್ರೆಗೆ ಆಹ್ವಾನ ನೀಡುವ ಕಾರ್ಯ...