ಹುಬ್ಬಳ್ಳಿ: ವೇಗವಾಗಿ ಬಂದ ಬೈಕೊಂದು ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಘಟನೆಯಲ್ಲಿ ಪಾದಚಾರಿ ಹಾಗೂ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಈಶ್ವರನಗರದಲ್ಲಿ ನಡೆದಿದೆ.
ಧಾರವಾಡದಿಂದ ಹುಬ್ಬಳ್ಳಿಗೆ ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಎಪಿಎಂಸಿಯಿಂದ ಈಶ್ವರನಗದತ್ತ ಬರುತ್ತಿದ್ದ ಮಗದುಮ್ ಎಂಬ ಕಾರ್ಮಿಕನಿಗೆ ಡಿಕ್ಕಿ ಹೊಡೆದಿದೆ. ಆಗ ಆತ ಸುಮಾರು 20 ಅಡಿ ಮುಂದೆ ಹೋಗಿ...