ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಅಡ್ಡೆಗಳು ನಾಯಿಕೊಡೆಯಂತೆ ಎದ್ದಿದ್ದು ಅಕ್ರಮ ಮರಳು ದಂಧೆಕೋರರ ಹಾವಳಿ ಮಿತಿಮೀರಿದೆ ಹಾಗೂ ಭಾರೀ ಗಾತ್ರದ ವಾಹಗಳಿಂದ ರಸ್ತೆಗಳು ಹಾಳಾಗುತ್ತಿವೆ. ಈ ದಂಧೆಯ ಹಿಂದೆ ಅಧಿಕಾರಿಗಳು ಶಾಮೀಲಾಗಿರುವ ಆರೋಪವೂ ಕೇಳಿಬಂದಿದೆ.
ಹುಬ್ಬಳ್ಳಿ ನಗರಕ್ಕೆ ಗದಗ ಜಿಲ್ಲೆಗಳಿಂದ ಸಾಕಷ್ಟು ಮರಳು ಸಾಗಾಟವಾಗುತ್ತಿದ್ದು ಅಧಿಕಾರಿಗಳ ಶಾಮೀಲಿನಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ...