ತುಮಕೂರಿನ ಹುಳಿಯಾರು ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿಯಾಗಿ ಮಂಜುನಾಥ್ ನೇಮಕಗೊಂಡಿದ್ದು, ಪೊಲೀಸರ ಬಿಗಿ ಭದ್ರತೆಯಲ್ಲಿ ಅಧಿಕಾರ ಸ್ವೀಕರಿಸಿದ್ರು. ಈ ಹಿಂದೆ ಇದೇ ಪಟ್ಟಣ ಪಂಚಾಯಿತಿಯಲ್ಲಿ ಮಂಜುನಾಥ್ ಕೆಲಸ ಮಾಡ್ತಿದ್ರು. ಇವರ ಕಾರ್ಯವೈಖರಿ ಬಗ್ಗೆ, ಸದಸ್ಯರು - ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ರು. ಇವರ ನಡವಳಿಯಿಂದ ಪಟ್ಟಣದಲ್ಲಿ, ಅನಾವಶ್ಯಕವಾಗಿ ಗಲಭೆಗಳು ಸೃಷ್ಟಿಯಾಗಿದ್ದವು. ಕೆಲ ದಾಖಲೆಗಳು ಕೂಡ ಕಾಣೆಯಾಗಿದ್ದವು...