ಯಮನ ಪಾಶ, ಯೆಮೆನ್ ಗಲ್ಲು ಶಿಕ್ಷೆಯಿಂದ ಪಾರಾಗೋದು ಅಷ್ಟು ಸುಲಭವಲ್ಲ. ಜುಲೈ 16ರಂದು ಯೆಮೆನ್‌ನಲ್ಲಿ ನಿಗದಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿಮಿಷಾ ಪ್ರಿಯಾ, ಕೇರಳದ ನರ್ಸ್. 2017ರಲ್ಲಿ ಯೆಮೆನ್‌ನಲ್ಲಿರುವ ತಮ್ಮ ವ್ಯವಹಾರ ಪಾಲುದಾರ ತಲಾಲ್ ಅಯ್ಯೋ ಮಹಿ ಅವರನ್ನು ಕೊಂದಿದ್ದಾರೆ ಎನ್ನಲಾದ ಆರೋಪ...