ಜುಲೈ ೭ ರಂದು ಬಿಡುಗಡೆಯಾದ ಮಲಯಾಳಂನ ಕಡುವ ಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿವಾದಕ್ಕಿಡಾಗಿದೆ. ಚಿತ್ರದಲ್ಲಿ ಅಂಗವಿಕಲರು ಮತ್ತು ಅವರ ಪೋಷಕರ ಕುರಿತು ಅನುಚಿತಸಂಭಾಷಣೆಗಳಿವೆ ಎನ್ನಲಾಗುತ್ತಿದ್ದು, ಈಗಾಗಲೇ ಚಿತ್ರದ ನಾಯಕ ಪೃಥ್ವಿರಾಜ್ ಸುಕುಮಾರನ್ ಮತ್ತು ನಿರ್ದೇಶಕ ಶಾಜಿ ಕೈಲಾಸ್ ಕ್ಷಮೆಯಾಚಿಸಿದ್ದಾರೆ. ಪೃಥ್ವಿರಾಜ್ ನಾಯಕನಾಗಿ ನಟಿಸಿರುವ ಈ ಸಿನಿಮಾದ ಒಂದು ದೃಶ್ಯದಲ್ಲಿ, ಅಂಗವಿಕಲರು ಮತ್ತು ಅವರ...