ಒಂದುಕಾಲದಲ್ಲಿ ಎಲ್.ಆರ್.ಈಶ್ವರಿ ತಮ್ಮ ಮಾದಕ ಕಂಠಕ್ಕೆ ಜನಪ್ರಿಯರಾಗಿದ್ದರು. ಮುಂದೆ ಕನ್ನಡದಲ್ಲಿ ಅಂತಹ ಸೊಗಡನ್ನು ನೀಡಿದಂತಹ ಗಾಯಕಿ ಮಂಜುಳಾ ಗುರುರಾಜ್. ಅವರು ಇಂತಹ ಗಾಯನಕ್ಕೇ ಸೀಮಿತರಾದವರಲ್ಲ. ಅವರ ಕಂಠಸಿರಿಯಲ್ಲಿನ ವೈವಿಧ್ಯತೆ ಅಪರೂಪದ್ದು. ಇನ್ನೊಂದು ರೀತಿಯಲ್ಲಿ ಕನ್ನಡದಲ್ಲಿ ಪರಭಾಷಾ ಗಾಯಕರ ಪಾರಮ್ಯ ನಡೆಯುತ್ತಿದ್ದಾಗ ಕನ್ನಡದ ಇಂಪನ್ನು ಮೂಡಿಸಿದ ಹೆಗ್ಗಳಿಕೆ ಕೂಡ ಅವರದ್ದೇ.
ಮಂಜುಳಾ ಅವರು ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದದ್ದು...