ಸಿದ್ದರಾಮಯ್ಯ ಸಂಪುಟದಿಂದ ಕೆ.ಎನ್. ರಾಜಣ್ಣ ವಜಾ ಮಾಡಿದ್ದಕ್ಕೆ, ಕೇವಲ ಮತಗಳ್ಳತನದ ಬಗ್ಗೆ ನೀಡಿದ್ದ ಹೇಳಿಕೆ ಕಾರಣವಲ್ಲ. ಬೇರೆ ಕಾರಣವೂ ಇದೆ ಅಂತೆ. ಇದನ್ನ ಸ್ವತಃ ರಾಜಣ್ಣ ಅವರೇ ಒಪ್ಪಿಕೊಂಡಿದ್ದಾರೆ. ನಾನು ಹನಿಟ್ರ್ಯಾಪ್ ಪ್ರಯತ್ನದ ಬಗ್ಗೆಯೂ ಹೇಳಿದ್ದೆ. ಡಿಸಿಎಂ ಬಗ್ಗೆಯೂ ಹೇಳಿದ್ದೆ. ಸಂಪುಟದಿಂದ ವಜಾ ಮಾಡುವುದಕ್ಕೆ ಇದೆಲ್ಲಾ ಕಾರಣ ಅನಿಸುತ್ತೆ. ಹೀಗಂತ ಶಾಂಕಿಂಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ.
ಸಂಪುಟಕ್ಕೆ...
ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಹಿಂದೆ ಗಾಂಧಿ ಕುಟುಂಬದ ಷಡ್ಯಂತ್ರ ಇದೆಯಂತೆ. ಹೀಗಂತ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಹಿಂದೂ ಧಾರ್ಮಿಕ ಸ್ಥಳಗಳಿಗೆ ಅಪಚಾರ ಮಾಡುವ ಸಲುವಾಗಿ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಒತ್ತಾಯಕ್ಕೆ, ಎಸ್‌ಐಟಿ ರಚನೆ ಮಾಡಲಾಗಿದೆ. ತನಿಖೆಯಲ್ಲಿ ಒಂದಾದರೂ ಬುರುಡೆ, ಮೂಳೆಗಳು ಸಿಕ್ಕಿವೆಯೇ? ಪಾನ್‌ಪರಾಗ್ ಚೀಟಿ ಸಿಕ್ಕಿದೆ. ಅದಕ್ಕಾಗಿ 20...
ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ವಾಗ್ವಾದಗಳು ಜೋರಾಗಿವೆ. ಧರ್ಮಸ್ಥಳದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಎಸ್‌ಐಟಿ ತನಿಖೆಗೆ ಕೊಟ್ಟಾಗಲೇ ಹಿಂದೂ ಧರ್ಮದ ವಿರೋಧಿಗಳಾಗಿರುವುದು ಗೊತ್ತಾಗಿದೆ. ನಿಮ್ಮ ಸರ್ಕಾರ ಬಂದ ಇಷ್ಟು ವರ್ಷದಲ್ಲಿ, ಮಸೀದಿಯಲ್ಲಿ ತಲೆ ಬುರುಡೆ, ಕಾಲು ಮೂಳೆ, ಕೈ ಮೂಳೆ, ಬೆರಳು ಮೂಳೆ ಸಿಕ್ಕಿದೆ...
ಕೆಎಂಎಫ್ ಚುನಾವಣೆ, ವಿಧಾನಸಭಾ, ಲೋಕಸಭಾ ಚುನಾವಣೆಗಳಿಗೂ ಕಮ್ಮಿ ಇಲ್ಲ. ಘಟಾನುಘಟಿ ನಾಯಕರ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ. ಅಧ್ಯಕ್ಷ ಹುದ್ದೆಗೆ ನಾಲ್ವರು ಕಾಂಗ್ರೆಸ್ ನಾಯಕರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಈ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ.
23 ಲಕ್ಷ ಸದಸ್ಯತ್ವವನ್ನು ಹೊಂದಿರುವ ಕೆಎಂಎಫ್, 4 ಒಕ್ಕೂಟದಿಂದ ಆರಂಭವಾಗಿ 16 ಒಕ್ಕೂಟಗಳವರೆಗೆ ಬೆಳೆದು ನಿಂತಿದೆ. ಗುಜರಾತ್...
ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ, ಗೃಹಲಕ್ಷ್ಮೀ ಯೋಜನೆ ಪ್ರಮುಖವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಮಾತುಕೊಟ್ಟಂತೆ, ಮನೆಯ ಒಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣ ನೀಡಲಾಗ್ತಿದೆ.
ಗ್ಯಾರಂಟಿ ಯೋಜನೆಯು ಗೃಹಿಣಿಯರ ಮನ ಗೆದ್ದಿದ್ದು, 2023ರಿಂದ ಇಲ್ಲಿಯವರೆಗೆ 20 ಕಂತುಗಳಲ್ಲಿ ಹಣ ನೀಡಲಾಗಿದೆ. ಇಲ್ಲಿಯವರೆಗೆ 47 ಸಾವಿರದ 487.90 ಕೋಟಿ ವೆಚ್ಚ ಭರಿಸಲಾಗಿದೆ.
ಒಟ್ಟು 1.24 ಕೋಟಿ...
ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ್ದಾರೆ. ಇದಾದ ಬಳಿಕ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರ ವಿಚಾರ ಮುನ್ನೆಲೆಗೆ ಬಂದಿದೆ. ಡಿಕೆಶಿಗೆ ಇರುವ ಅವಕಾಶ, ರಾಜಣ್ಣ ವಿಚಾರದಲ್ಲಿ ಏಕಿಲ್ಲ? ಅನ್ನೋ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಹಿರಿಯ ಕಾಂಗ್ರೆಸ್ಸಿಗ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದು, ರಾಜಣ್ಣ ಅವರು ರಾಹುಲ್ ಗಾಂಧಿ ವಿರುದ್ಧ ಎಲ್ಲಿಯೂ ಮಾತಾಡಿಲ್ಲ....
ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಕೊನೆಗೂ ಕ್ಷಮೆಯಾಚಿಸಿದ್ದಾರೆ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ, ತಪ್ಪು ಮಾಡಿದ್ದೇನೆಂದು ಭಾವಿಸಿದ್ರೆ ಕ್ಷಮೆ ಇರಲಿ ಅಂತಾ ಮನವಿ ಮಾಡಿದ್ದಾರೆ.
ಕಳೆದ ಆಗಸ್ಟ್ 22ರಂದು ವಿಧಾನಸಭಾ ಅಧಿವೇಶನದಲ್ಲಿ, ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂಬ ಗೀತೆಯನ್ನ ಡಿಕೆಶಿ ಹಾಡಿದ್ರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದ ಕುರಿತು ಚರ್ಚೆ ನಡೆಯುತ್ತಿದ್ದಾಗ ಗದ್ದಲ...
ಡಿಕೆಶಿ RSS ಗೀತೆ ವಿಚಾರವಾಗಿ, ರಾಜ್ಯ ಕಾಂಗೆಸ್ಸಲ್ಲಿ ಆಕ್ರೋಶ ಭುಗಿಲೆದ್ದಿದೆ. ಸೆಪ್ಟಂಬರ್ ಕ್ರಾಂತಿ ಬಳಿಕ ಕಾಂಗ್ರೆಸ್ಸಿಗರ ವಿರುದ್ಧ ಮೈತ್ರಿ ಪಕ್ಷಗಳಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿತ್ತು.
2024ರ ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆಗ ಮತದಾರರ ಪಟ್ಟಿ ಸಿದ್ಧವಾಗಿತ್ತು. ಆಗ ಕಣ್ಮುಚ್ಚಿ ಕುಳಿತುಕೊಂಡು, ಈಗ ಹೇಳಿದ್ರೆ ಏನು ಪ್ರಯೋಜನ ಅಂತಾ ಕೆ.ಎನ್. ರಾಜಣ್ಣ...
ನಮಸ್ತೇ ಸದಾ ವತ್ಸಲೇ.. ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದ ಡಿಸಿಎಂ ಡಿಕೆಶಿ ವಿರುದ್ಧ, ಸ್ವಪಕ್ಷದವರೇ ಆದ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಟೀಕಿಸಿದ್ದಾರೆ. ಡಿ.ಕೆ ಶಿವಕುಮಾರ್ ಸಂಸ್ಕೃತ ಬಲ್ಲವರು. ಹೀಗಾಗಿ ಅಧಿವೇಶನದಲ್ಲಿ ಸಮಯಕ್ಕೆ ತಕ್ಕಂತೆ ಉತ್ತರಿಸುವ ಬದಲು, RSS ಗೀತೆ ಹಾಡಿದ್ದಾರೆ.
RSS ಗೀತೆ ಹಾಡಿದ್ರೆ ಮುಖ್ಯಮಂತ್ರಿ ಸ್ಥಾನ ಸಿಗುವುದಾದ್ರೆ, ನಾನು ಮತ್ತು ಶಾಸಕ ಚನ್ನಾರೆಡ್ಡಿ ಪಾಟೀಲ್...
ತುಂಬಿದ ಸದನದಲ್ಲಿ RSS ಗೀತೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಹಾಡಿದ್ರು. ಇದಾದ ಬಳಿಕ, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಪಕ್ಕಾ ಕಾಂಗ್ರೆಸ್‌ವಾದಿಗಳು, ಇದನ್ನ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಖರ್ಗೆ, ಸಿದ್ದರಾಮಯ್ಯರಂತ ಹಿರಿಯ ರಾಜಕಾರಣಿಗಳು ಕೂಡ, ಆರ್‌ಎಸ್‌ಎಸ್‌ಗೆ ತದ್ವಿರುದ್ಧ.
ಹೀಗಿರುವಾಗ, ಸೋನಿಯಾ ಗಾಂಧಿ ನನ್ನ ತಾಯಿ ಇದ್ದಂತೆ ಎಂದಿದ್ದ ಬಾಯಲ್ಲೇ, ಆರ್‌ಎಸ್‌ಎಸ್ ಗೀತೆಯನ್ನು ಡಿಕೆಶಿ...