ಬಿಜೆಪಿ ಪಕ್ಷದಿಂದ ಉಚ್ಚಾಟನೆ ಬಳಿಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೊಸ ಪಕ್ಷ ಕಟ್ಟುವ ಸುಳಿವು ಕೊಡುತ್ತಲೇ ಬಂದಿದ್ರು. ಇದೀಗ ಹಿಂದುತ್ವಕ್ಕೆ ಹೊಸ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಸೃಷ್ಟಿಯಾಗುತ್ತಿರುವ, ಹೊಸ ಪಕ್ಷದ ಹೆಸರು, ಫೋಟೋ ವೈರಲ್ ಆಗಿದೆ.
ಭಾರತ ರಾಷ್ಟ್ರ ಹಿತ ಪಾರ್ಟಿ ಹೆಸರಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ. ಆದರೆ...
ಎಡಪಂಥಿಯರಿಗೆ ಓನರ್, ಮಾಸ್ಟರ್ ಮೈಂಡ್ ಸಿದ್ದರಾಮಯ್ಯ. ಇವರೆಲ್ಲರೂ ಸೇರುತ್ತಿದ್ದದ್ದು ಸಿದ್ದರಾಮಯ್ಯ ಮನೆಯಲ್ಲಿ. ಧರ್ಮಸ್ಥಳ ಪ್ರಕರಣವನ್ನು, ಎಸ್‌ಐಟಿಗೆ ಕೊಡೋಕೆ ಆದೇಶ ಮಾಡಿದ್ದು ಇದೇ ಎಡಪಂಥಿಯರು. ಇಂಥಾ 10 ಸಭೆ ಮಾಡಲಿ. ಇಂದು ರಾಜ್ಯದ ಜನರಿಗೆ ಸ್ಪಷ್ಟವಾಗಿದೆ. ಎಸ್‌ಐಟಿಯ ಮೊಹಾಂತಿಯವರ ಹೆಸರನ್ನು ಕೂಡ, ಈ ಎಡಪಂಥಿಯರೇ ಹೇಳಿದ್ದು. ಈಗ ಇಲ್ಲ ಅಂತಾ ಹೇಳಿದ್ರೆ, ಜನ ಸರಿಯಾದ ಪಾಠ...
ಸಂಪುಟದಿಂದ ವಜಾಗೊಂಡ 2 ದಿನಗಳ ಕಾಲ, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲೇ ಕೆ.ಎನ್. ರಾಜಣ್ಣ ಇದ್ರು. ಇಂದು ತುಮಕೂರಿನ ಮಧುಗಿರಿಗೆ ಭೇಟಿ ಕೊಟ್ಟಿದ್ದಾರೆ. 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ರಾಜಣ್ಣ ಅವರು ಮತ್ತೆ ತಮ್ಮ ಹಳೇ ಖದರ್‌ನಲ್ಲಿ ಮಾತನಾಡಿದ್ದಾರೆ.
ನನ್ನ ವಿರುದ್ಧ ಮೂವರಿಂದ ಪಿತೂರಿ ನಡೆದಿದೆ ಎಂದು ಕೆ.ಎನ್. ರಾಜಣ್ಣ ಆರೋಪಿಸಿದ್ದಾರೆ....
ಸಿದ್ದರಾಮಯ್ಯ ಸಂಪುಟದಿಂದ ವಜಾ ಆಗಿರುವ ಕೆ.ಎನ್ ರಾಜಣ್ಣ ಅವರು ಈಗ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ ಗೃಹ ಸಚಿವ ಪರಮೇಶ್ವರ್ ಜೊತೆ ರಾಜಣ್ಣ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಕೊಟ್ಟ ಬಳಿಕ ರಾಜಣ್ಣ ಅವರು ಇದೊಂದು ಷಡ್ಯಂತ್ರ, ಪಿತೂರಿ ಎಂಬ ಹೇಳಿಕೆ ನೀಡಿದ್ದರು. ಇದೀಗ ಆಗಿರೋ ದೊಡ್ಡ ಅನಾಹುತವನ್ನ ಸರಿಪಡಿಸೋ ದಾರಿ ಹುಡುಕುತ್ತಿದ್ದಾರೆ.
ಪರಮೇಶ್ವರ್ ಜೊತೆ ಒಂದು...
ಕೆ.ಎನ್ ರಾಜಣ್ಣ ಅವರನ್ನು ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಡಲಾಗಿದೆ. ರಾಜಣ್ಣ ಅವರ ವಜಾ ಕೇವಲ ಒಂದೇ ಒಂದು ದಿನದಲ್ಲಿ ನಡೆದಿರೋ ಬೆಳವಣಿಗೆಯಲ್ಲ. ರಾಜಣ್ಣ ಕಿಕ್ ಔಟ್ ಆದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಮುನ್ನಡೆಯಾದ್ರೆ, ಸಿದ್ದರಾಮಯಯ್ಯ ಬಣಕ್ಕೆ ಆದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರಾಜಣ್ಣ ಸಂಪುಟದಿಂದ ವಜಾಗೊಂಡಿದ್ದಕ್ಕೆ 4 ಪ್ರಮುಖ ಬೆಳವಣಿಗೆಗಳು ಕಾರಣವಾಗಿವೆ.
ನಂಬರ್...
ಕೆ.ಎನ್. ರಾಜಣ್ಣ ರಾಜೀನಾಮೆ ಪ್ರಹಸನಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಿದ್ದರಾಮಯ್ಯಗೆ, ರಾಜಣ್ಣ ರಾಜೀನಾಮೆ ಪತ್ರ ಸಲ್ಲಿಸಿದ್ರು. ಪಿಎಸ್ ಡಾ. ವೆಂಕಟೇಶಯ್ಯ ಕೈಗೆ ರಾಜೀನಾಮೆ ಪತ್ರ ನೀಡಿದ್ರು. ಹೀಗಾಗಿ ಪಿಎಸ್ ಅನ್ನು ಕಚೇರಿಗೆ ಕರೆಸಿಕೊಂಡು, ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದ್ದಾರೆ.
ಬಲಗೈ ಬಂಟನಂತಿದ್ದ ರಾಜಣ್ಣನ ರಾಜೀನಾಮೆಯಿಂದ, ಸಿದ್ದರಾಮಯ್ಯ ಅಘಾತಕ್ಕೆ ಒಳಗಾಗಿದ್ದಾರೆ. ಎಂಎಲ್‌ಸಿ ರಾಜೇಂದ್ರ...
ರಾಜಣ್ಣ ರಾಜೀನಾಮೆ ವಿಚಾರ, ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ವಾಲ್ಮೀಕಿ ಹಗರಣದಲ್ಲಿ 14 ತಿಂಗಳ ಹಿಂದೆ, ನಾಗೇಂದ್ರ ಕೂಡ ರಾಜೀನಾಮೆ ಕೊಟ್ಟಿದ್ರು. ಇದೀಗ ರಾಜಣ್ಣ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಈ ಇಬ್ಬರು ನಾಯಕರು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಒಂದೇ ಸಮುದಾಯದ ಇಬ್ಬರು ನಾಯಕರು ರಾಜೀನಾಮೆ ನೀಡಿದಂತಾಗಿದೆ. ಇಬ್ಬರೂ ಕೂಡ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು....
ಸೆಪ್ಟಂಬರ್ ಕ್ರಾಂತಿಗೂ ಮುನ್ನವೇ ಕಾಂಗ್ರೆಸ್ಸಿನ ಫಸ್ಟ್ ವಿಕೆಟ್ ಔಟ್ ಆಗಿದೆ. ಸಚಿವ ಸ್ಥಾನಕ್ಕೆ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ನೇರವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜಣ್ಣ ರಾಜೀನಾಮೆ ವಿಚಾರದಲ್ಲಿ, ಒಳಗಿನ ಲೆಕ್ಕಾಚಾರಗಳು ಬೇರೆಯದ್ದೇ ಇರುತ್ತೆ. ರಾಜಣ್ಣ ಅವರ ಹೇಳಿಕೆಗಳೂ ಯಾವಾಗಲೂ, ಸಿಎಂ ಸುತ್ತಮುತ್ತಲೇ ಇರ್ತಿತ್ತು. ಸಿದ್ದರಾಮಯ್ಯಗೆ ಬೆಂಬಲ ಕೊಡುವ, ಶಕ್ತಿ ತುಂಬ ಕೆಲಸ...
ರಾಜ್ಯದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ದಾಖಲೆ ಸಮೇತ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ನಾವು 16 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ, ಆಂತರಿಕ ಸಮೀಕ್ಷೆ ಹೇಳಿತ್ತು. ಆದರೆ ನಾವು 9 ರಲ್ಲಿ ಗೆದ್ದೆವು. 7 ರಲ್ಲಿ ಅನಿರೀಕ್ಷಿತವಾಗಿ ಜಯವನ್ನ ಕಳೆದುಕೊಂಡೆವು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲೂ ಅಕ್ರಮ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು ಕೇಂದ್ರ...
ಮುಷ್ಕರವನ್ನು ಕೈ ಬಿಟ್ಟಿಲ್ಲ.. ಕೇವಲ ಮುಂದೂಡಿದ್ದೇವೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರೇ ಈ ಸ್ಪಷ್ಟನೆ ನೀಡಿದ್ದಾರೆ. ಹೈಕೋರ್ಟ್ ಸೂಚನೆ ಮೇರೆಗೆ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಅಷ್ಟೇ. ಸಾಧ್ಯವಾದರೆ ಈ ಕ್ಷಣದಿಂದಲೇ ನೌಕರರು ಕೆಲಸಕ್ಕೆ ಹಾಜರಾಗಿ ಅಂತಾ, ಅನಂತ ಸುಬ್ಬರಾವ್ ಅವರು ಕರೆ ಕೊಟ್ಟಿದ್ದಾರೆ.
ನಾವು ಇಷ್ಟು ತಿಂಗಳಿಂದಲೇ ಕಾದಿದ್ದೇವೆ....