ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಹಜ. ಅದರಂತೆ ದೊಡ್ಡ ಸಮಸ್ಯೆ ಏನಾದರೂ ಇದ್ದರೆ ಆ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡು, ಸಮಸ್ಯೆ ಪರಿಹಾರವಾದ್ರೆ ನಾನು ಹೀಗೆ ಮಾಡುತ್ತೇನೆ ಹಾಗೆ ಮಾಡುತ್ತೇನೆ ಎಂದು ದೇವರಲ್ಲಿ ಹರಕೆ ಹೊರಲಾಗುತ್ತದೆ. ಹೊತ್ತ ಹರಕೆಯನ್ನ ತೀರಿಸದಿದ್ದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಹೊತ್ತ...
ಇಡೀ ಕರ್ನಾಟಕದಲ್ಲಿ ಇರುವ ಕೊರೋನಾ ಪಾಸಿಟಿವ್ ಕೇಸ್‌ಗೆ ಸಮವಾಗಿ ಬರೀ ಬೆಂಗಳೂರಿನಲ್ಲಿ ಕೊರೊನಾ ಕೇಸ್‌ಗಳು ಹೆಚ್ಚುತ್ತಿದೆ. ಈ ಕಾರಣಕ್ಕೆ ಅರ್ಧಕ್ಕರ್ಧ ಬೆಂಗಳೂರನ್ನೇ ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ಕೆಲ ಏರಿಯಾಗಳನ್ನ ಕಂಟೈನ್‌ಮೆಂಟ್ ಝೋನ್ ಅಂತಾ ಘೋಷಿಸಲಾಗಿದೆ. ಅದರಲ್ಲೂ ಬೆಂಗಳೂರಿನ ದಕ್ಷಿಣ ವಲಯದಲ್ಲಿ ಹೆಚ್ಚು ಕಂಟೈನ್‌ಮೆಂಟ್ ಝೋನ್‌ಗಳಿದೆ.
https://youtu.be/0XhlkpKn4tc
ಬೆಂಗಳೂರು ದಕ್ಷಿಣ ವಲಯದಲ್ಲಿ ಇದೆ ಅತೀ ಹೆಚ್ಚು ಕಂಟೈನ್ಮೆಂಟ್ ಝೋನ್...
ಬೆಂಗಳೂರು: ಹಳ್ಳಿ ಜನರ ಆರೋಗ್ಯ ತಪಾಸಣೆಗೆ ಶೀಘ್ರದಲ್ಲೇ ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ, ವಿಧಾನಸಭಾ ಕ್ಷೇತ್ರ, ಬ್ಲಾಕ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಉಸ್ತುವಾರಿಗೆ ನಿಯೋಜಿತರಾಗಿರುವ ಪ್ರತಿನಿಧಿಗಳೊಂದಿಗೆ ಜತೆ ಚರ್ಚೆ ನಡೆಸಿದ ಡಿ.ಕೆ ಶಿವಕುಮಾರ್...
ಡ್ರೋಣ್ ಪ್ರತಾಪ್.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಸದ್ದು ಮಾಡುತ್ತಿರುವ ಹುಡುಗ. ಡ್ರೋಣ್ ತಯಾರಿಸಿದ್ದೇನೆಂದು ಹೇಳಿ ಎರಡು ವರ್ಷದಿಂದ ಸನ್ಮಾನ ಮಾಡಿಸಿಕೊಂಡು ಬಂದಿದ್ದ ಪ್ರತಾಪನ ಬಣ್ಣ ಸದ್ಯ ಬಯಲಾಗಿದ್ದು, ಈತ ಮಾಡಿದ ಎಡವಟ್ಟಿನಿಂದ ಪೊಲೀಸರ ಪಾಲಾಗಿದ್ದಾನೆ.
ಈ ಕೊರೊನಾ ಟೈಮಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವುದನ್ನ ನಿಷೇಧಿಸಿದ್ದರೂ, ಪ್ರತಾಪ್ ಮಂಡ್ಯದಿಂದ ಬೆಂಗಳೂರಿಗೆ ಬಂದ....
ಮೇಷ: ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಇಲ್ಲವಾದರೂ ನಿಭಾಯಿಸಿಕೊಂಡು ಹೋಗಬಹುದಾಗಿದೆ. ನೂತನ ಕೆಲಸ ಕಾರ್ಯಗಳಿಗೆ ಸ್ಪಷ್ಟ ನಿರ್ಧಾರದ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಶ್ರದ್ಧೆ ತೋರಿಸುವುದು.
ವೃಷಭ: ಅವಿವಾಹಿತರು ವೈವಾಹಿಕ ಸಂಬಂಧಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಲ್ಲಿ ಕಂಕಣಬಲಕ್ಕೆ ಪೂರಕವಾಗಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳತಕ್ಕದ್ದು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಿದೆ.
ಮಿಥುನ: ನಿರುದ್ಯೋಗಿಗಳು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವುದು...
ತುಳಸಿ ಗಿಡ, ನಿಂಬೆ ಹಣ್ಣಿನ ಗಿಡ, ಅರಿಷಿನ- ಕುಂಕುಮ, ತೆಂಗಿನಕಾಯಿ ಇವೆಲ್ಲ ದೈವಿಕ ಗುಣಗಳುಳ್ಳದ್ದಾಗಿದೆ. ದೇವರ ಪೂಜೆಗೆ ಉಪಯೋಗವಾಗುವ ಈ ವಸ್ತುಗಳು ನಮ್ಮ ಜೀವನದ ಸಂಕಷ್ಟ ಪರಿಹರಿಸುವಲ್ಲೂ ಸಹಕಾರಿಯಾಗಿದೆ. ಅದು ಹೇಗೆ..? ಇಂಥ ವಸ್ತುಗಳಿಂದ ಹೇಗೆ ನಾವು ನಮ್ಮ ಜೀವನದ ಕಷ್ಟವನ್ನ ಪರಿಹರಿಸಿಕೊಳ್ಳಬಹುದು ಅನ್ನೋದನ್ನ ತಿಳಿಯೋಣ ಬನ್ನಿ.
ಶನಿ ದೇವನ ಕೃಪೆ ಇದ್ದರೆ ಜೀವನದಲ್ಲಿ ಎಲ್ಲವೂ...
ಹಲವರಿಗೆ ಹಲವು ಬಾರಿ ರಸ್ತೆಯಲ್ಲಿ ಹಣ ಸಿಗುತ್ತದೆ. ರಸ್ತೆಯಲ್ಲಿ ಹಣ ಸಿಕ್ಕರೆ ಅದೃಷ್ಟ ಖುಲಾಯಿಸಿದಂತೆ ಅಂತಾನೂ ಹೇಳ್ತಾರೆ. ಆದ್ರೆ ರಸ್ತೆಯಲ್ಲಿ ಸಿಕ್ಕ ಹಣವನ್ನ ಹಾಗೇ ತಂದು ಮನೆಯಲ್ಲಿ ಇರಿಸುವಂತಿಲ್ಲ. ಅಲ್ಲದೇ, ಸಿಕ್ಕ ನಾಣ್ಯವನ್ನ ಖರ್ಚು ಮಾಡಬಾರದು.
ಇನ್ನು ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನ ಮನೆಗೆ ತಂದು ಅರಿಷಿನದ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ದೇವರಕೊಣೆಯಲ್ಲಿ ಒಂದು ಚಿಕ್ಕ ಬೌಲ್‌ನಲ್ಲಿ...
ಕರ್ನಾಟಕದಲ್ಲಿ ತನ್ನ ವಿಭಿನ್ನ, ವಿಶಿಷ್ಟ ಆಚರಣೆಯಿಂದ ಹೆಸರಾದ ತುಳುನಾಡಿಗರಿಗೆ ಇಂದು ಆಟಿ ಅಮವಾಸ್ಯೆಯ ಸಂಭ್ರಮ. ಆಟಿ ಅಮವಾಸ್ಯೆಯ ವಿಶೇಷವೇನು..? ಈ ದಿನ ಏನೇನು ಮಾಡಲಾಗುತ್ತದೆ..? ಇದೆಲ್ಲದರ ಬಗ್ಗೆ ಇಂದು ಚಿಕ್ಕ ಮಾಹಿತಿ ನೀಡಲಿದ್ದೇವೆ.
ಆಟಿ ಅಮವಾಸ್ಯೆ. ತುಳು ನಾಡಿಗರಿಗೆ ಇದು ವಿಶೇಷ ದಿನ. ಶ್ರಾವಣ ಮಾಸವನ್ನ ತುಳುವರು ಆಟಿ ತಿಂಗಳು ಎಂದು ಹೇಳುತ್ತಾರೆ. ಈ...
ಮನೆಯಲ್ಲಿ ಚಪ್ಪಲಿ ಯಾಕೆ ಧರಿಸಬಾರದು, ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದರಿಂದ ಏನಾಗುತ್ತದೆ ಅನ್ನೋದರ ಬಗ್ಗೆ ತಿಳಿಸಿಕೊಡಲಿದ್ದೇವೆ.
ಈಗಂತೂ ಮನೆಯಲ್ಲಿ ಚಪ್ಪಲಿ ಹಾಕೊಂಡು ತಿರುಗಾಡೋದು ಫ್ಯಾಷನ್ ಆಗಿಬಿಟ್ಟಿದೆ. ಕೆಲ ಹಾಸ್ಟೇಲ್, ಪಿಜಿಗಳಲ್ಲಿ ಹೆಣ್ಣು ಮಕ್ಕಳು ರೂಮ್ ಒಳಗೆ ಹಾಕೊಂಡು ತಿರುಗೋಕ್ಕಂತಾನೇ ವೆರೈಟಿ ವೆರೈಟಿ ಚಪ್ಪಲಿ ಕೊಂಡುಕೊಳ್ತಾರೆ. ಅದರಲ್ಲೂ ರೂಮೆಟ್ಸ್ ಜೊತೆ ಕಾಂಪಿಟೇಶನ್ ಮಾಡ್ತಾರೆ.
ಕೆಲವರು ಸ್ವಚ್ಛತೆಯ ದೃಷ್ಟಿಯಿಂದ...
ಶಕ್ತಿ ಬರ್ಬೇಕಂದ್ರೆ ರಾಗಿ ತಿನ್ಬೇಕು, ರಾಗಿ ತಿಂದವನಿಗೆ ರೋಗವಿಲ್ಲ, ರಾಗಿ ಮುದ್ದೆ ಗಟ್ಟಿ ನಿದ್ದೆ. ಹೀಗೆ ಸಾಲು ಸಾಲು ಮಾತುಗಳನ್ನ ನಾವು ರಾಗಿ ಬಗ್ಗೆ ಕೇಳ್ಪಟ್ಟಿದ್ದೇವೆ.
ಅಷ್ಟೇ ಏಕೆ ಕೊರೊನಾ ಆರ್ಭಟ ಜೋರಾಗಿದ್ದರ ಪರಿಣಾಮವಾಗಿ ನಾನ್‌ವೆಜ್ ಬಿಟ್ಟು ವೆಜ್ ತಿನ್ನಲು ಶುರು ಮಾಡಿದ ಕೆಲ ವಿದೇಶಿಗರು ರಾಗಿ ಮುದ್ದೆ ಮೊರೆ ಹೋಗಿದ್ದನ್ನ ನಾವು ಸೋಶಿಯಲ್ ಮೀಡಿಯಾದಲ್ಲಿ...
ನಶೆಮುಕ್ತ ಕರ್ನಾಟಕ ಅಭಿಯಾನಕ್ಕೆ ಬೆಂಬಲವಾಗಿ ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 1 ರಂದು ಬೃಹತ್ ಮ್ಯಾರಥಾನ್...