Friday, November 28, 2025

Karnataka politics

ಕಾಂಗ್ರೆಸ್ CM ಕುರ್ಚಿ ಕಿತ್ತಾಟಕ್ಕೆ ಸ್ವಾಮೀಜಿಗಳ ಎಂಟ್ರಿ!

ಯಾರಾಗಬೇಕು ಮುಂದಿನ ಮುಖ್ಯಮಂತ್ರಿ? ಕಾಂಗ್ರೆಸ್‌ನ ನಾಯತ್ವ ಬದಲಾವಣೆಯ ಚರ್ಚೆ ಗರಿಗೆದರುತ್ತಿರುವ ಸಂದರ್ಭದಲ್ಲಿ, ಈಗ ಧಾರ್ಮಿಕ ವಲಯದಿಂದಲೂ ಡಿಕೆ ಶಿವಕುಮಾರ್ ಪರ ಧ್ವನಿಗಳು ಕೇಳಿಬರುತ್ತಿವೆ. ಶಿರಾದ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಡಿಕೆಶಿಗೂ ಒಂದು ಅವಕಾಶ ಕೊಡಲೇಬೇಕು ಎಂದು ಹೈಕಮಾಂಡ್‌ಗೆ ಸಂದೇಶ ನೀಡಿದ್ದಾರೆ. ನಂಜಾವಧೂತ ಸ್ವಾಮೀಜಿ ಸ್ವತಃ...

ಪ್ರತಾಪ್ ಸಿಂಹ ಬ್ರಿಟಿಷರ ನಾಯಿ ತೊಳೆಯಬೇಕಿತ್ತು ಅಂದಿದ್ದಕ್ಕೆ ತಿರುಗೇಟು ಕೊಟ್ಟ ಯತ್ನಾಳ್

SDPI ನಾಯಕ ಮೌಲಾನಾ ನೂರುದ್ದೀನ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ. ಟಿಪ್ಪು ಸುಲ್ತಾನ್ ಕುರಿತಂತೆ ಮಾತನಾಡಿದ ವೇಳೆ ಅವರು ಇಬ್ಬರ ವಿರುದ್ಧವೂ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ರಾಮನಗರದ ರೈಲ್ವೇ ಸ್ಟೇಷನ್ ಸರ್ಕಲ್‌ನಲ್ಲಿ...

ದಲಿತ ಮುಖ್ಯಮಂತ್ರಿಯ ಸಮಯ ಬಂದಿದೆ: ಸಂಜಯ್ ಕುಮಾರ್ ಶ್ರೀ ಒತ್ತಾಯ!

ಕರ್ನಾಟಕದಲ್ಲಿ ದಲಿತರನ್ನ ಸಿಎಂ ಮಾಡ್ಲಿ ಅಂತ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿಡಗಲ್ ಸಂಸ್ಥಾನ ಪೀಠದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಮಾತನಾದ್ದಾರೆ. ರಾಜ್ಯದಲ್ಲಿ ದಲಿತ ಸಮುದಾಯದಿಂದಲೇ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದರು. ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ‘ಅವರೇ ಸಿಎಂ ಆಗಬೇಕು’ ಎಂದು ನಾನು ಹೇಳಿಲ್ಲ. ಆದರೆ ದಲಿತ ಸಮುದಾಯಕ್ಕೆ...

ಡಿಕೆಶಿ CM ಆಗಲಿ 1001 ತೆಂಗಿನಕಾಯಿ ಒಡೆದ JDS-BJP ಮುಖಂಡರು!

ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡಿಗೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರಾದ ರಾಜು, ವೇಣು ಮತ್ತು ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಕಾರ್ಯಕರ್ತರು ತೆಂಗಿನಕಾಯಿ ಒಡೆಯುವ ಕಾರ್ಯವನ್ನ ಮಾಡಿದ್ದಾರೆ. ಕಾರ್ಯಕರ್ತರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹರಿಕೆ ಹೊತ್ತು 1001 ತೆಂಗಿನಕಾಯಿಗಳನ್ನು ಒಡೆದು ದೇವಿಗೆ ಅರ್ಪಿಸಿದರು....

ಸಿದ್ದರಾಮಯ್ಯ 2.5 ವರ್ಷ CM: ಅಧಿಕಾರ ಹಂಚಿಕೆ ಚರ್ಚೆ ಇಲ್ಲ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, ತಮ್ಮ ತಂದೆಯ ಮೇಲೆ ಯಾವುದೇ ಆರೋಪವಿಲ್ಲದೆ, ಅಧಿಕಾರ ಹಂಚಿಕೆಯ ಸೂತ್ರವೂ ರಚನೆಯಾಗಿಲ್ಲ ಎಂದು ದೃಢಪಡಿಸಿದ್ದಾರೆ. ಸಿದ್ದರಾಮಯ್ಯ ಇನ್ನೂ ಎರಡೂವರೆ ವರ್ಷ ತಮ್ಮ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ ಅವರು, ಸಿಎಂ ಸಿದ್ದರಾಮಯ್ಯ ಪೂರ್ಣಾವಧಿಗೆ ಕಾರ್ಯನಿರ್ವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವ...

ಸಿದ್ದು – ಡಿಕೆಶಿ ಫೈಟ್ ನಡುವೆ ಹೈಕಮಾಂಡ್ ಕ್ಲೈಮ್ಯಾಕ್ಸ್!?

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಥಾನದಲ್ಲಿ ಮುಂದುವರಿಸಲು ಅಹಿಂದ ಸಮುದಾಯದ ಸಚಿವರು ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಮಾತ್ರ ಹೈಕಮ್ಯಾಂಡ್ ತೀರ್ಮಾನಕ್ಕೆ ಬದ್ದ ಎಂದಿದ್ದಾರೆ. ಹಾಗಾದರೇ ಹೈಕಮ್ಯಾಂಡ್ ತೀರ್ಮಾನವೇನು? ಅನ್ನೋ ಪ್ರಶ್ನೆ ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ಕ್ಯಾಬಿನೆಟ್‌ನ ಅಹಿಂದ ಸಚಿವರು ಮಂಗಳವಾರ...

ಇನ್ನೊಂದೇ ತಿಂಗಳಲ್ಲಿ ನಾನೇ ಬಾಗೇಪಲ್ಲಿ ಶಾಸಕ: BJP ನಾಯಕನ ಸ್ಫೋಟಕ ಹೇಳಿಕೆ!

ಬಾಗೇಪಲ್ಲಿ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಮೂಡಿಸುವಂತೆ, ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ನೂ ಒಂದೇ ತಿಂಗಳಲ್ಲಿ ನಾನು ಬಾಗೇಪಲ್ಲಿ ಶಾಸಕನಾಗುತ್ತೇನೆ. ಈಗಿನ ಶಾಸಕ ಸುಬ್ಬಾರೆಡ್ಡಿ ಸಚಿವನಾಗುವ ಕನಸು ಕಾಣ್ತಿದ್ದಾರೆ ಆದರೆ ನಾನು ಶಾಸಕನಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ. ಮುನಿರಾಜು ಅವರು ಬಾಗೇಪಲ್ಲಿ ಶಾಸಕ S.N....

ಡಿಕೆಶಿ ಪರ ಬೆಂಬಲ: ಸಿಎಂ ವಿಷಯಕ್ಕೆ ಮಠದಿಂದ ಸ್ಪಷ್ಟ ಸಂದೇಶ!

ರಾಜ್ಯ ರಾಜಕೀಯದಲ್ಲಿ ಪವರ್ ಶೇರಿಂಗ್ ಗದ್ದಲ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಮಠದಲ್ಲಿ ಮಾತನಾಡಿದ ಸ್ವಾಮೀಜಿ, ಪಕ್ಷಕ್ಕಾಗಿ ಶಿಸ್ತಿನ ಸಿಪಾಯಿಯಾಗಿ ದುಡಿದ ಶಿವಕುಮಾರ್ ಅವರಿಗೆ ಒಂದು ಅವಕಾಶ ನೀಡಬೇಕು. ಉಳಿದ ಎರಡೂವರೆ ವರ್ಷಗಳ...

ʻಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼ ಸಿಎಂ ಸಿದ್ದರಾಮಯ್ಯ ಕಡೆಗೆ ಶಾರ್ಪ್ ಮೆಸೇಜ್?

ರಾಜ್ಯದಲ್ಲಿ ಸಿಎಂ–ಡಿಸಿಎಂ ಪವರ್ ಶೇರಿಂಗ್ ವಿವಾದ ತೀವ್ರವಾಗಿರುವ ಸಂದರ್ಭದಲ್ಲಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. “Word Power is World Power. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಅಂತ ಇಂದು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ಇದು ನೇರವಾಗಿ ಸಿಎಂ ಸಿದ್ದರಾಮಯ್ಯ...

ನಾಯಕತ್ವ ಪೈಪೋಟಿ ನಡುವೆ ಜಾರಕಿಹೊಳಿ ‘ಡಿನ್ನರ್‌ ಮೀಟಿಂಗ್‌’

ರಾಜಕೀಯ ಹಿನ್ನಲೆಯಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆ, ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾದ ಕೆಲ ಗಂಟೆಗಳಲ್ಲೇ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತ ಶಾಸಕರೊಂದಿಗೆ ನಗರದಲ್ಲಿರುವ ಗೋಲ್ಡ್‌ ಫಿಂಚ್‌ ಹೋಟೆಲಿನಲ್ಲಿ ಡಿನ್ನರ್‌ ಮೀಟಿಂಗ್‌ ನಡೆಸಿದ್ದಾರೆ. ಮಂಗಳವಾರ ರಾತ್ರಿ ಜಾರಕಿಹೊಳಿ ಜೊತೆ ಡಿಕೆಶಿ ಮಾತುಕತೆ ನಡೆಸಿದ್ದರು. ಈ ವೇಳೆ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಡಿಕೆಶಿ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img