ಕಳೆದ ಕೆಲ ವಾರಗಳಿಂದ ಚಿನ್ನದ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ಮಧ್ಯೆ ಅಲ್ಪ ಇಳಿಕೆ ಕಂಡರೂ ತಕ್ಷಣವೇ ಮತ್ತೆ ಹೊಸ ದಾಖಲೆ ನಿರ್ಮಿಸುತ್ತಿವೆ. ಅಕ್ಟೋಬರ್ 9ರಂದು 24 ಕ್ಯಾರೆಟ್ ಚಿನ್ನದ ದರ ₹1, 24,150 ತಲುಪಿದೆ. ತಜ್ಞರ ಪ್ರಕಾರ ಇದು ಹಠಾತ್ ಬದಲಾವಣೆ ಆಗಿದ್ದು, ಬಬಲ್ ಟ್ರೆಂಡ್‌ನ ಲಕ್ಷಣಗಳು ಕಾಣಿಸುತ್ತಿವೆ — ಅಂದರೆ ವೇಗವಾಗಿ...
ಮಧ್ಯಪ್ರದೇಶದಲ್ಲಿ 20 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಮಾಲೀಕ ಎಸ್. ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಂದು ಬೆಳಿಗ್ಗೆ ಚೆನ್ನೈನಲ್ಲಿ ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯದಲ್ಲಿ ವಿಷಕಾರಿ ಸಿರಪ್ ಸೇವನೆದಿಂದ ಕನಿಷ್ಠ...
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿಗ್ನಿ ಗ್ರಾಮದಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ ಐದು ತಿಂಗಳ ಹಿಂದೆ ಮದುವೆಯಾದ 20 ವರ್ಷದ ಸಾಕ್ಷಿ ಕಂಬಾರ ಅವರನ್ನು, ಅವರ ಪತಿ ಆಕಾಶ್ ಕಂಬಾರ ಬರ್ಬರವಾಗಿ ಕೊಲೆಮಾಡಿ ಶವವನ್ನು ಬೆಡ್ ಕೆಳಗೆ ಅಡಗಿಸಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಮೂರು ದಿನಗಳ ಹಿಂದೆ...
ಕಾಂಗ್ರೆಸ್ನಿಂದ ಕೆ.ಎನ್. ರಾಜಣ್ಣ ಅವರನ್ನು ತೆಗೆಯಲು ನಡೆದಿತ್ತಾ ಪ್ಲಾನ್? ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿಯಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜಣ್ಣ ಹೇಳಿಕೆ ಪ್ರಕಾರ, ಇದು ಒಂದೇ ಬಾರಿ ನಡೆದ ವಿಷಯವಲ್ಲ ನಾಲ್ಕು ಬಾರಿ ಅವರನ್ನು ಕಾಂಗ್ರೆಸ್‌ನಿಂದ ತೆಗೆಯುವ ಪ್ಲಾನ್ ನಡೆದಿತ್ತಂತೆ. 1984,...
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರಣ ನೀಡಿ ದಸರಾ ರಜೆ ವಿಸ್ತರಿಸಿರುವ ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.
ಪೂರ್ವ ತಯಾರಿ ಇಲ್ಲದೆ, ಯಾರದೋ ಒತ್ತಡಕ್ಕೆ ಮಣಿದು ಸರ್ಕಾರ ಆತುರದಲ್ಲಿ...
ಬೀದಿ ನಾಯಿಗಳಿಂದ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರು ಬೇಸತ್ತು ಹೋಗಿದ್ದಾರೆ. ಇಷ್ಟು ದಿನ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದ ಪಾಲಿಕೆ ಈಗ ಜವಾಬ್ದಾರಿತನ ತೋರಿಸಲು ಮುಂದಾಗಿತ್ತು. ಆದರೂ ಕೂಡ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಯೇ ಉಳಿದಿರುವ ಮಾರ್ಗ ಎಂಬುವುದನ್ನು ಅರ್ಥ ಮಾಡಿಕೊಂಡಿದ್ದ ಪಾಲಿಕೆಯು, ದತ್ತು ಕಾರ್ಯ ಆರಂಭಿಸಿತ್ತು. ಆದರೂ ಕೂಡ...
ಸಚಿವ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸುಳಿವಿನ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಇತ್ತಿಚೆಗೆ ಮೌನವಾಗಿದ್ದ ಆಕಾಂಕ್ಷಿಗಳು ಈಗ ಸಕ್ರಿಯರಾಗಿದ್ದು, ವಿವಿಧ ರೀತಿಯಲ್ಲಿ ಲಾಬಿ ಕಾರ್ಯ ಆರಂಭಿಸಿದ್ದಾರೆ. ಎಲ್ಲವೂ ಯೋಜನೆಯಂತೆ ನಡೆದರೆ ವರ್ಷಾಂತ್ಯದಲ್ಲೇ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಬಹಳಷ್ಟಿದೆ.
ಒಂದು ಕಡೆ ಸಿಎಂ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿದ್ದರೆ,...
ಮೈಸೂರು ದಸರಾ ನಾಡಹಬ್ಬದ ಸಂಭ್ರಮದ ನಡುವೆ ಈ ಬಾರಿ ಚಾಮರಾಜೇಂದ್ರ ಮೃಗಾಲಯ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಮೆರೆಯಿತು.
ಹಬ್ಬದ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಜನಸಾಗರದಿಂದಾಗಿ ಮೃಗಾಲಯದಲ್ಲಿ ದಾಖಲೆಯ ಮಟ್ಟದ ಆದಾಯ ಸಂಗ್ರಹವಾಗಿದ್ದು, ಒಟ್ಟು 191.37 ಲಕ್ಷ ಗಳಿಸಲಾಗಿದೆ. ಇದು ಕಳೆದ ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಮೊತ್ತವಾಗಿದ್ದು ಹೊಸ ದಾಖಲೆ ನಿರ್ಮಿಸಿದೆ.
ದಸರಾ ಅವಧಿಯಲ್ಲಿ 1.56...
ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಅವರು ಸಿದ್ದರಾಮಯ್ಯ ಅವರನ್ನು ಟೀಕಿಸಿ, ಕೇವಲ ಕಾಲಾವಧಿಯ ದಾಖಲೆ ಮುರಿದ ಕಾರಣಕ್ಕೆ ಅವರು ಮತ್ತೊಬ್ಬ ದೇವರಾಜ ಅರಸು ಆಗಲಾರರು ಎಂದು ಹೇಳಿದ್ದಾರೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದಿಂದಲೇ ನಾಯಕತ್ವದ ಗೊಂದಲ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ಆರೋಪಿಸಿದ್ದಾರೆ.
ತೆಲಂಗಾಣ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್...
ದೊಡ್ಡಕೆರೆ ಮೈದಾನದ ಬಳಿ ನಡೆದ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಐವರು ಮಂಗಳವಾರ ತಡರಾತ್ರಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಮನೋಜ್ ಅಲಿಯಾಸ್ ಬಿಗ್ ಶೋ, ಮಲ್ಲಿಕಾರ್ಜುನ ಅಲಿಯಾಸ್ ಹಾಲಪ್ಪ ಸೇರಿದಂತೆ ಐವರು ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಚೆಗೆ ನಡೆದ ಕಾರ್ತಿಕ್ ಹತ್ಯೆ ಪ್ರಕರಣದ ನಂತರ ಉಂಟಾದ ಘಟನೆಗಳ ಸರಪಳಿಯೇ ವೆಂಕಟೇಶ್ ಹತ್ಯೆಗೆ ಕಾರಣವಾಗಿದೆ ಎಂದು...