Thursday, October 22, 2026

]karnataka tv

ಲೈಂಗಿಕ ದೌರ್ಜನ್ಯ ಆರೋಪದ ಕೆಲವೇ ಗಂಟೆಗಳಲ್ಲಿ ಅರ್ಚಕ ನೇಣು ಬಿಗಿದು ಆತ್ಮಹತ್ಯೆ

ಮುಂಬೈನ ಕಾಂಡಿವಲಿ ಉಪನಗರದ ದೇವಾಲಯದಲ್ಲಿ 52 ವರ್ಷದ ಅರ್ಚಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆತಂಕ ಮೂಡಿಸಿದೆ. 19 ವರ್ಷದ ಯುವತಿಯೊಬ್ಬಳು ಅರ್ಚಕರ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಕೆಲವೇ ಗಂಟೆಗಳಲ್ಲೇ ಈ ಘಟನೆ ನಡೆದಿದೆ. ದೇವಾಲಯದೊಳಗೆ ಸೀಲಿಂಗ್ ಫ್ಯಾನ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು...

ಪವನ್ ಕಲ್ಯಾಣ್ OG ಸಿನಿಮಾಗೆ ಆಂಧ್ರದಲ್ಲಿ ಮಧ್ಯರಾತ್ರಿ ಶೋಗಳಿಗೆ ಗ್ರೀನ್ ಸಿಗ್ನಲ್, ತೆಲಂಗಾಣದಲ್ಲಿ ನಿರಾಕರಣೆ

ದಕ್ಷಿಣ ಭಾರತದ ಜನಪ್ರಿಯ ರಾಜಕೀಯ ನಾಯಕ ಹಾಗೂ ಆಂಧ್ರ ಉಪಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್, ರಾಜಕೀಯ ಜವಾಬ್ದಾರಿಗಳ ಜೊತೆಗೆ ಸಿನೆಮಾ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ಹರಿ ಹರ ವೀರ ಮಲ್ಲು ಸಿನಿಮಾ ಬಿಡುಗಡೆಯಾದರೂ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಸಾಧಿಸಲಿಲ್ಲ. ಇದೀಗ ಅವರು ನಟಿಸಿರುವ ಮತ್ತೊಂದು ಸಿನಿಮಾ ಓಜಿ ಸೆಪ್ಟೆಂಬರ್ 25ರಂದು ಬಿಡುಗಡೆಗೆ ಸಜ್ಜಾಗಿದೆ....

ಮೋಹನ್ ಲಾಲ್ ಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ : ಮೋದಿಯಿಂದ ಅಭಿನಂದನೆ!

ಮಲಯಾಳಂ ಸಿನಿಮಾ ಮತ್ತು ನಾಟಕ ರಂಗದ ದಂತಕಥೆಯ ನಟ ಮೋಹನ್ ಲಾಲ್ರನ್ನು 2023ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆ ಈ ಘೋಷಣೆ ಮಾಡಿದ್ದು, ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು ಮೋಹನ್ ಲಾಲ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಮೋಹನ್ ಲಾಲ್...

ನಮ್ಮ ಮಗಳನ್ನು ವಾಪಸ್ ಕೊಡಿ! ಮೋಸ ಮಾಡಿದ ಯೂಟ್ಯೂಬರ್ ಮುಕಳೆಪ್ಪ

ಶಾರ್ಟ್ ಮೂವಿ ಮೂಲಕ ಯೂಟ್ಯೂಬ್ನಲ್ಲಿ ಮನರಂಜನೆ ನೀಡುತ್ತಿದ್ದ ಖ್ವಾಜಾ ಶಿರಹಟ್ಟಿ, ಜನಪ್ರಿಯ ಮುಕಳೆಪ್ಪ, ವಿರುದ್ಧ ದೂರು ದಾಖಲಾಗಿದೆ. ಗಾಯಿತ್ರಿ ಯಲ್ಲಪ್ಪ ಜಾಲಿಹಾಳ್ ಅವರ ಪಾಲಕರು, ಮುಕಳೆಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ನಮ್ಮ ಮಗಳನ್ನು ಬೆಳೆಯಲು ಸಹಾಯ ಮಾಡುವ ಉದ್ದೇಶದಿಂದ ಮುಕಳೆಪ್ಪ ಅವರೊಂದಿಗೆ ಕಳುಹಿಸಿದ್ದೆವು. ಆದರೆ, ಅವರು ನಮ್ಮ ನಂಬಿಕೆಯನ್ನು ಮೋಸಮಾಡಿ,...

ಕರ್ನಾಟಕ ರೈತರಿಗೆ ನವರಾತ್ರಿ ಕೊಡುಗೆ : 5 ಧಾನ್ಯಗಳ ಖರೀದಿಗೆ ಅನುಮತಿ!

ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಕರ್ನಾಟಕದ ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರ ಒತ್ತಾಸೆಯ ಮೇರೆಗೆ, ನವರಾತ್ರಿ ಕೊಡುಗೆಯಾಗಿ ರೈತರ ಹಿತಕ್ಕಾಗಿ ಬೆಂಬಲ ಬೆಲೆಯಲ್ಲಿ ಐದು ಧಾನ್ಯಗಳ ಖರೀದಿಗೆ ಅನುಮತಿ ನೀಡಲಾಗಿದೆ. 2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು, ಉದ್ದು, ಶೇಂಗಾ, ಸೋಯಾಬಿನ್...

ಆನೆ ತಬ್ಬಿಕೊಂಡು ರೀಲ್ಸ್ ಹುಚ್ಚಾಟ ಯುವತಿ ವಿರುದ್ದ ಬಿತ್ತು ಕೇಸ್ !

ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಆನೆಗಳ ವಾಸ್ತವ್ಯ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶಿಸಿ, ಆನೆಗಳ ಜೊತೆ ಅಪಾಯಕಾರಿಯಾಗಿ ರೀಲ್ಸ್ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವತಿ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಅರಮನೆ ಆವರಣದಲ್ಲಿ ಆನೆಗಳು ಹಾಗೂ ಮಾವುತರ ಕುಟುಂಬ ವಾಸ್ತವ್ಯ ಹೂಡಲು ಅರಣ್ಯ ಇಲಾಖೆ ವಿಶೇಷ ವ್ಯವಸ್ಥೆ...

ಮೋದಿ ಕ್ರೆಡಿಟ್ ಕಾರ್ಡ್ ಪ್ರೀ ಲೋನ್ : ಬಡ್ಡಿ ಕಟ್ಟೊಂಗಿಲ್ಲ!

ಕೇಂದ್ರ ಸರ್ಕಾರವು ಸಣ್ಣ ವ್ಯಾಪಾರಿಗಳ ಹಿತದೃಷ್ಠಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈಗ ಅದರಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಯೋಜನೆಯನ್ನೂ ಪರಿಚಯಿಸಲು ಸಜ್ಜಾಗಿದೆ. ಸಾಮಾನ್ಯ ಬ್ಯಾಂಕ್ಗಳು ನೀಡುವ ಕ್ರೆಡಿಟ್ ಕಾರ್ಡ್ಗಳಂತೆ, ವ್ಯಾಪಾರಿಗಳಿಗೆ ಮುಂಗಡ ಪಾವತಿ ಸೌಲಭ್ಯ ಒದಗಿಸುವ ಉದ್ದೇಶದಿಂದ “ಮೋದಿ ಕ್ರೆಡಿಟ್ ಕಾರ್ಡ್” ಅನ್ನು ಸರ್ಕಾರ ತರಲು ನಿರ್ಧರಿಸಿದೆ. ಈ ಕಾರ್ಡ್ ಸಣ್ಣ ವ್ಯಾಪಾರಿಗಳಿಗೆ ತಮ್ಮ...

ಬೆಂಗಳೂರು ವಿವಿ ಉಪನ್ಯಾಸಕಿಗೆ ಕಿರುಕುಳ? ಉಪನ್ಯಾಸಕರ ವಿರುದ್ಧ FIR

ಬೆಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿಗೆ, ಅತಿಥಿ ಉಪನ್ಯಾಸಕರೇ ಲೈಂಗಿಕ ಕಿರುಕುಳ ನೀಡಿದ್ದಾರಂತೆ. ಆರೋಪ ಹಿನ್ನೆಲೆ ಅತಿಥಿ ಉಪನ್ಯಾಸಕರಾದ ಸ್ವರೂಪ್ ಕುಮಾರ್, ರಾಮಾಂಜನೇಯ, ರಂಗಸ್ವಾಮಿ, ಜಗನ್ನಾಥ ಮತ್ತು ಶಿವರಾಮ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಎಫ್.ಐ.ಆರ್. ದಾಖಲಾದ ನಂತರ ಉಪನ್ಯಾಸಕರಾದ ರಾಮಾಂಜನೇಯರ ಹಲವು ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋಗಳಲ್ಲಿ, ರಾಮಾಂಜನೇಯ ಮದ್ಯ ಸೇವನೆ ಮಾಡಿ, ಬೆಂಗಳೂರು ವಿಶ್ವವಿದ್ಯಾಲಯದ...

BJP ಗೆ ಬಲ ಕೊಡುತ್ತಾ ಚಿಂತನ-ಮಂಥನ ಸಭೆ ಏನೆಲ್ಲಾ ಆಯ್ತು?

ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಇದೀಗ ಆಂತರಿಕ ದಿಕ್ಕೊಂದರಲ್ಲಿ ತತ್ತರಿಸಿದೆ. ಆಡಳಿತ ಪಕ್ಷದ ವಿರುದ್ಧ ಹೋರಾಟ ನಡೆಸಿದರೂ, ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಗಂಭೀರವಾಗಿ ಎದ್ದು ಕಾಣುತ್ತಿದೆ. ಈ ವಿಷಯವನ್ನು ಸಮರ್ಥವಾಗಿ ಚರ್ಚಿಸಲು, ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ರಾಜಕೀಯ ಚಿಂತನ-ಮಂಥನ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ರಾಷ್ಟ್ರೀಯ ನಾಯಕರು ರಾಜ್ಯ ಬಿಜೆಪಿ ನಾಯಕರಿಗೆ ಕೆಲವೊಂದು ಮಾರ್ಗದರ್ಶನಗಳನ್ನು...

ಕೊನೆಗೂ ವಿದ್ಯುತ್ ಬೆಳಕು ನೋಡ್ಲಿಲ್ಲ! ಯಾರೀ ಸಸ್ಯಶಾಸ್ತ್ರಜ್ಞೆ ಹೇಮಾ ಸಾನೆ!?

ಭಾರತದಲ್ಲಿ ವಿದ್ಯುತ್​ ಸಂಪರ್ಕವಿಲ್ಲದ ಹಳ್ಳಿಗಳು ತೀರಾ ವಿರಳ ಎನ್ನಬಹುದು. ಒಂದೇ ಒಂದು ನಿಮಿಷ ವಿದ್ಯುತ್ ವ್ಯತ್ಯಯ ಉಂಟಾದ್ರೂ ಒದ್ದಾಡಿ ಹೋಗ್ತೀವಿ. ಆದರೇ, ಇಲ್ಲೊಬ್ಬ ಅಜ್ಜಮ್ಮ ಹುಟ್ಟಿದಾಗಿನಿಂದ ಇಲ್ಲೀ ತನಕ ವಿದ್ಯುತ್ ಬೆಳಕನ್ನೇ ನೋಡದೇ, ಅದನ್ನ ಬಳಸದೇ ಬರೀ ಪ್ರಕೃತಿಯನ್ನೇ ಪ್ರೀತಿಸಿದ್ರು. ಆದ್ರೀಗ ಅದೇ ಪ್ರಕೃತಿ ಮಡಿಲು ಸೇರಿದ್ದಾರೆ. ಡಾ. ಹೇಮಾ ಸಾನೆ, ಪುಣೆಯ ಪ್ರಸಿದ್ಧ...
- Advertisement -spot_img

Latest News

ಪ್ರತಿ ಮನೆ ಮನೆಗೂ ಅಭಿವೃದ್ಧಿಯ ಬೆಳಕು ತಲುಪಬೇಕು ಎಂಬುದೇ ನಮ್ಮ ಸಂಕಲ್ಪ: ಸಿಎಂ ಡಿ ಕೆ ಶಿವಕುಮಾರ್

Political News: “ನಾಡ ಹಬ್ಬ ದಸರಾ ಸಂದರ್ಭದಲ್ಲಿ ದ್ವೇಷ ದೂರವಾಗಿ, ಸಾಮರಸ್ಯ ಬೆಳೆಯಬೇಕು. ಅಭಿವೃದ್ಧಿಯ ಬೆಳಕು ಪ್ರತಿ ಮನೆ ಮನೆಗೂ ತಲುಪಬೇಕು ಎಂಬುದು ನಮ್ಮ ಸಂಕಲ್ಪ....
- Advertisement -spot_img