ಪಾಕಿಸ್ತಾನ: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ, 20 ಮಂದಿ ಸಾವನ್ನಪ್ಪಿ, 300ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಇವ್ವಿನ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಇಂದು ಮುಂಜಾನಾ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ. 5.6ರಷ್ಟು ತೀವ್ರತೆ ಭೂಕಂಪ ದಾಖಲಾಗಿದ್ದು, ಕ್ವೆಟ್ಟಾ, ಸಿಬಿ ಹರ್ನಾಯ್, ಪಿಶಿನ್, ಕ್ವಿಲಾ ಸೈಫುಲ್ಲಾ, ಚಮನ್, ಜೈರಾತ್ ಮತ್ತು ಜೂಬ್ ಪ್ರದೇಶದಲ್ಲಿ...
ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮಲೇರಿಯಾ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಇದಕ್ಕೆ ವಿಶ್ವಸಂಸ್ಥೆ ಅನುಮೋದನೆ ನೀಡಿದೆ.
ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದು ಇದಕ್ಕೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳ ದಶಕಗಳ ಪ್ರಯತ್ನ ಇದೀಗ ಫಲಿಸಿದೆ. 'ಮೊಸ್ಕಿರಿಕ್ಸ್' ಎಂಬ ಹೆಸರಿನ ಈ ಲಸಿಕೆ ಕೇವಲ ಮಲೇರಿಯಾ ಮಾತ್ರವಲ್ಲದೆ, ಪರಾವಲಂಬಿ ಜೀವಿಗಳಿಂದ ತಗುಲುವ...
ಬೆಳಗಾವಿ: ಬೆಳಗಾವಿಯಲ್ಲಿ ನಿನ್ನೆ ಸುರಿದ ಧಾರಕಾರ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ 7 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಬಡಾಲ ಅಂಕಲಗಿಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದ ಮನೆ ಕುಸಿದು ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿ, ತೀವ್ರ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮೃತರನ್ನು ಗಂಗವ್ವ...
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆಯೇ ರಾಜಧಾನಿ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಭ್ರಷ್ಟರ ಭೇಟೆಗಿಳಿದಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ಏಕಕಾಲದಲ್ಲಿ 50ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ನಗರದ ಉದ್ಯಮಿಗಳ ಮನೆ, ಚಾಟರ್ಡ್ ಅಕೌಂಟೆಂಟ್ ಗಳ ಮನೆ ಕಚೇರಿ ಸೇರಿದಂತೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿವೆ.
ಬೆಂಗಳೂರು ಮತ್ತು ಗೋವಾ ವಲಯದ 300ಕ್ಕೂ ಹೆಚ್ಚು...
ರಾಯಚೂರು: ರಾಯಚೂರಿನಲ್ಲಿ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದ್ರೂ ಸಹ ಜೀವದ ಹಂಗು ತೊರೆದು ರೈತರು ಹರಿಯುವ ನೀರಿನಲ್ಲೇ ತಮ್ಮ ಜೀವ ಪಣಕ್ಕಿಟ್ಟು ಓಡಾಡುತ್ತಿದ್ದಾರೆ.
ಹೌದು ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಉಪ್ಪಾರನಂದಿಗಾಳ ಕಿಲ್ಲಾರಹಟ್ಟಿ ಮುಖ್ಯ ರಸ್ತೆ ನೀರಿನಿಂದ ಜಲಾವೃತವಾಗಿತ್ತು. ಆದ್ರೂ ಸಹ ಬೇರೆ ದಾರಿ ಇಲ್ಲದೆ ರೈತರು ಹರಿಯುತ್ತಿರೋ ನೀರಿನ ಮಧ್ಯೆಯೇ...
ಆಂಧ್ರಪ್ರದೇಶ: ಆಂಧ್ರಪ್ರದೇಶ ಸರ್ಕಾರ ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ 'ಸ್ವೇಚ್ಛಾ' ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ನೀಡಲು ನಿರ್ಧಾರ ಮಾಡಿದೆ.
7 ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ ಬೇಕಾಗಿರುವ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ನಿರ್ಧರಿಸಿದ್ದು ಇದಕ್ಕೆ ಯುನಿಸೆಫ್, ಪ್ರೋಕ್ಟರ್ ಅಂಡ್ ಗ್ಯಾಂಬಲ್ ಸಂಸ್ಥೆಯ ಸಹಭಾಗಿತ್ವ ವಹಿಸಿಕೊಂಡಿದೆ. ಇನ್ನು ಹೆಣ್ಣುಮಕ್ಕಳ...
ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಅಕ್ಬೋಬರ್ 7 ರಂದು ಚಾಲನೆ ದೊಯಲಿದ್ದು ಈ ಮಧ್ಯೆ ರಾಜ್ಯ ಸರ್ಕಾರ ದಸರಾ ಮಹೋತ್ಸವಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅರಮನೆ ಆವರಣದಲ್ಲಿ ದಸರಾ ಆಚರಣೆ ಮಾಡಬೇಕು ಅಂತ ಆದೇಶಿಸಿರೋ ರಾಜ್ಯ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಹೊಸ ಮಾರ್ಗಸೂಚಿಗಳನ್ನು ಖಡ್ಡಾಯಗೊಳಿಸಿದೆ.
ಇನ್ನೂ ಸರ್ಕಾರದ ನೂತನ ಮಾರ್ಗಸೂಚಿಗಳ ಪ್ರಮುಖ ಅಂಶಗಳನ್ನು...
ರಾಯಚೂರು: ರಸ್ತೆಯ ಬದಿಯಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ನವಿಲನ್ನು ವ್ಯಕ್ತಿಯೊಬ್ಬರು ಆರೈಕೆ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಪೂರು ಸೀಮೆಯ ಹೊರವಲಯದಲ್ಲಿ ಕಳೆದ 10 ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಅಸ್ವಸ್ಥ ಸ್ಥಿತಿಯಲ್ಲಿ ನವಿಲೊಂದು ಪತ್ತೆಯಾಗಿತ್ತು. ಅಸ್ವಸ್ಥಗೊಂಡ ನವಿಲನ್ನು ಸಲಾಲುದ್ದೀನ್ ಎಂಬುವರು ತಮ್ಮ ಮನೆಗೆ ಕರೆದೊಯ್ದಿದ್ದರು. ನವಿಲಿನ ಆರೈಕೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಯ ನೆರವನ್ನೂ ಪಡೆದ...
ದೇಶದಲ್ಲಿ ಪೆಟ್ರೋಲ್, ಡೀಸಲ್ ದರ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ಇಂದೂ ಕುಡ ತೈಲ ದರ ಏರಿಕೆಯಾಗಿದ್ದು , ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಪೈಸೆ ಏರಿಕೆಯಾಗಿದ್ದರೆ , ಡೀಸಲ್ ಪ್ರತಿ ಲೀಟರ್ ಗೆ 32 ಪೈಸೆ ಏರಿಕೆ ಕಂಡಿದೆ. ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಳಿತದ ನಡುವೆ ಭಾರತದಲ್ಲಿ ಕಳೆದ...
ಬೆಳಗಾವಿ: ಬಜ್ಜಿ ಸೇವಿಸಿ ಅಸ್ವಸ್ಥಗೊಂಡ ತಾಯಿ ಮಗ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಪಾರ್ವತಿ ಮಳಗಲಿ (53), ಸೋಮನಿಂಗಪ್ಪ ಮಳಗಲಿ(28) ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಹೊಲಗೆಲಸಕ್ಕೆಂದು ತೆರಳಿದ್ದ ತಾಯಿ ಮತ್ತು ಮಗ ಸಂಜೆ ಮನೆಗೆ ಬಂದ ವೇಳೆ ಬಜ್ಜಿ ಸೇವಿಸಿದ್ದರು. ಆ ಬಳಿಕ ವಾಂತಿ ಪ್ರಾರಂಭವಾಗಿದೆ. ಕೂಡಲೇ ಇವರಿಬ್ಬರನ್ನೂ ಸ್ಥಳೀಯ...