ಶಾಲೆಯಲ್ಲೇ ವಿದ್ಯಾರ್ಥಿಗಳ ಮಧ್ಯೆ ನಡೆದ ಜಗಳ ಭೀಕರ ಅಂತ್ಯ ಕಂಡಿದ್ದು, ಸಹಪಾಠಿಯಿಂದ ಚಾಕು ಇರಿತಕ್ಕೊಳಗಾದ 10ನೇ ತರಗತಿಯ ನಯರ್, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಮಂಗಳವಾರ ಅಹಮದಾಬಾದ್‌ನ ಖಾಸಗಿ ಶಾಲೆಯೊಂದ್ರಲ್ಲಿ, ಈ ದಾರುಣ ಘಟನೆ ನಡೆದಿದೆ. 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಜಗಳದ ವೇಳೆ 10ನೇ ತರಗತಿಯ ಹಿರಿಯ ವಿದ್ಯಾರ್ಥಿಗೆ ಚಾಕು ಇರಿದಿದ್ದಾನೆ...