Thursday, July 23, 2026

Kolar

ಕೋಲಾರದಲ್ಲಿ ಮತದಾನ ಆರಂಭ: ಮತದಾರರಿಗೆ ಪ್ರಭಾವ ಬೀರದಂತೆ ಎಚ್ಚರಿಕೆ..

ಕೋಲಾರ: ಕೋಲಾರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 7 ಗಂಟೆಯಿಂದ ಮತದಾನ ಮಾಡಲು ಜನ ಬರುತ್ತಿದ್ದಾರೆ. ಕೋಲಾರ ಜಿಲ್ಲೆಯಾದ್ಯಂತ ಮತದಾನಕ್ಕೆ ಚಾಲನೆ ಸಿಕ್ಕಿದ್ದು, ಚುನಾವಣಾ ಹಬ್ಬ ಆಚರಿಸಲು ಬೆಳ್ಳಂ ಬೆಳಿಗ್ಗೆ ಮತದಾರರು ಆಗಮಿಸಿದ್ದಾರೆ. ಮತದಾನ ಮಾಡಲು ಆಗಮಿಸಿದ ಮತದಾರರ ಐಡಿ ಕಾರ್ಡ್ ಚೆಕ್ ಮಾಡಿ ಮತದಾನಕ್ಕೆ ಅವಕಾಶ ಕೊಡಲಾಗುತ್ತಿದೆ. ಸ್ಥಳದಲ್ಲಿ ಅಹಿತಕರ ಘಟನೆ ಜರುಗದಂತೆ ಬಿಗಿ ಪೋಲೀಸ್...

‘ರಾಜ್ಯದಲ್ಲಿ ಶಾಂತಿಯನ್ನು ಕದಡಿಸುತ್ತಿದ್ದಾರೆ. ನಾವು ಶಾಂತಿ ಮೂಡಿಸಬೇಕಾಗಿದೆ’

ಕೋಲಾರ: ಬಜರಂಗದಳ ನಿಷೇಧ ಕುರಿತ ವಿಚಾರದ ಬಗ್ಗೆ ಡಿ.ಕೆ.ಶಿವಕುಮಾರ್, ಮುಳಬಾಗಿಲಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಾನೂನು ಸುವ್ಯವಸ್ಥೆಯನ್ನು ಅವರು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿಯನ್ನು ಕದಡಿಸುತ್ತಿದ್ದಾರೆ. ನಾವು ಶಾಂತಿ ಮೂಡಿಸಬೇಕಾಗಿದೆ ಎಂದು ಹೇಳಿದ್ದಾರೆ. ಅವರು ಯಾವುದೇ ಪಕ್ಷದಲ್ಲಿರಲಿ, ನಮಗೆ ಅಭ್ಯಂತರ ಇಲ್ಲ. ಅನೇಕ ಕಡೆ ಇಂದು ಕಾನೂನಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಮ್ಮಲ್ಲಿ ಶಾಂತಿಯ...

‘ಕೆ.ಆರ್.ಪುರದಲ್ಲಿ ಗೂಂಡಾವರ್ತನೆ ತಾಂಡವವಾಡುತ್ತಿದ್ದು ಅದಕ್ಕೆ ಕಡಿವಾಣ ಬೇಕಿದೆ’

ಕೆಆರ್ ಪುರ: ಬಡ ಮಧ್ಯಮ ವರ್ಗದ ಜನರ ಬದುಕು,ಭವಿಷ್ಯವನ್ನು ಕಿತ್ತುಕೊಂಡಿರುವ ಬಿಜೆಪಿ ಪಕ್ಷವನ್ನು ದೂರವಿಟ್ಟು ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಬಾಬು ತಿಳಿಸಿದರು. ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಎಚ್.ಎ.ಎಲ್.ವಿಜ್ಞಾನನಗರ,ನೆಲ್ಲೂರುಪುರಂ,ರೆಡ್ಡಿಪಾಳ್ಯ ಎಲ್.ಬಿ.ಶಾಸ್ತ್ರಿ ನಗರ, ಅಬ್ಬಯ್ಯ ರೆಡ್ಡಿ ಬಡಾವಣೆ, ವಿಭೂತಿಪುರ, ಅನ್ನಸಂದ್ರಪಾಳ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಬಿರುಸಿನ...

‘ಕಾಂಗ್ರೆಸ್‌ 85ಪರ್ಸೆಂಟ್ ಕಮಿಷನ್‌ಗೆ ಖ್ಯಾತಿಯಾಗಿದೆ, ಯಾವಾಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತದೆ’

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಇಂದು ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದು, ಕಾಂಗ್ರೆಸ್‌ನದ್ದು 85 ಪರ್ಸೆಂಟ್ ಕಮಿಷನ್ ಗೆ ಖ್ಯಾತಿಯಾಗಿದೆ ಎಂದು ಆರೋಪಿಸುವ ಮೂಲಕ ಕೋಲಾರ‌ ಜಿಲ್ಲೆಯಲ್ಲಿ‌ ಭರ್ಜರಿ ಚುನಾವಣಾ ಪ್ರಚಾರನ್ನ ನಡೆಸಿದ್ದಾರೆ. ಕೋಲಾರ‌ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಕೆಂದಟ್ಟಿ ಬಳಿ, ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ನವ ಕರ್ನಾಟಕ‌ ಸಂಕಲ್ಪ ಸಮಾವೇಶದಲ್ಲಿ...

ಇಂದು ಮಧ್ಯಾಹ್ನದವರೆಗೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸಂಚಾರ ನಿರ್ಬಂಧ..

ಕೋಲಾರ: ಇಂದು ಕೋಲಾರದಲ್ಲಿ ಪ್ರಧಾನಿ ಮೋದಿ ಪ್ರಚಾರಕ್ಕೆ ಬರಲಿದ್ದು, ಕೋಲಾರದ‌ ರಾಷ್ಟ್ರೀಯ ಹೆದ್ದಾರಿ 75ರ ಕೆಂದಟ್ಟಿ ಬಳಿ‌ ಕಾರ್ಯಕ್ರಮ ಜರುಗಲಿದೆ.. ಈ ಕಾರ್ಯಕ್ರಮಕ್ಕೆ ೨.೫ ಲಕ್ಷ‌ ಜನ ಸೇರುವ ನಿರೀಕ್ಷೆ ಇದೆ. ಈ‌ ಹಿನ್ನೆಲೆ ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೂ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಂಗಳೂರುರಿಂದ ಚಿತ್ತೂರ ಕಡೆ ಹೋಗಲು ಹಾಗೂ...

ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಸಿದ್ಧವಾದ ಚಿನ್ನದ ನಾಡು..

ಕೋಲಾರ: ಚಿನ್ನದ ನಾಡು ಕೋಲಾರಕ್ಕೆ ಇನ್ನು ಕೆಲವೇ ನಿಮಿಷಗಳಲ್ಲಿ ಪ್ರಧಾನಿ ಮೋದಿ ಆಗಮಿಸಲಿದ್ದಾರೆ.  ಬೆಂಗಳೂರಿನ ರಾಜಭವನದಿಂದ ಕೋಲಾರದ ಸಮಾವೇಶಕ್ಕೆ ಮೋದಿ ಆಗಮಿಸಲಿದ್ದು, ಕೋಲಾರ ತಾಲೂಕಿನ ಕೆಂದಟ್ಟಿ ಬಳಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮೋದಿ ಜೊತೆಗೆ ಮಾಜಿ ಸಿಎಂ ಸದಾನಂದ ಗೌಡ, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸಂಸದ ಎಸ್.ಮುನಿಸ್ವಾಮಿ ವೇದಿಕೆಯಲ್ಲಿ ಭಾಗಿಯಾಗಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು...

ನಾಮಪತ್ರ ಸಲ್ಲಿಸಿದ ಎಸ್.ಎನ್.ನಾರಾಯಣಸ್ವಾಮಿ ಮತ್ತು ವರ್ತೂರು ಪ್ರಕಾಶ್..

ಕೋಲಾರ : ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ, ಎಸ್.ಎನ್.ನಾರಾಯಣ ಸ್ವಾಮಿ, ನಾಮಪತ್ರ ಸಲ್ಲಿಸಿದ್ದಾರೆ. ಬೃಹತ್‌ ಮೆರವಣಿಗೆ ಮೂಲಕ ಬಂಗಾರಪೇಟೆ ತಾಲೂಕು ಚುನಾವಣಾಧಿಕಾರಿ ಕಚೇರಿಗೆ ಬಂದು, ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಎಂ.ಎಲ್‌.ಸಿ ಅನೀಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಸಾಥ್ ಕೊಟ್ಟಿದ್ದಾರೆ. ಇನ್ನೊಂದೆಡೆ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವರ್ತೂರು...

‘ಈ ಸರ್ಕಾರ ಸಾರ್ವಜನಿಕ ಉದ್ದಿಮೆ ಖಾಸಗಿಯವರಿಗೆ ಮಾರಿ ಯುವಕರನ್ನು ಬೀದಿಗೆ ತಳ್ಳಿದ್ದಾರೆ’

ಕೋಲಾರ: ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕೋಲಾರ ಬಂಗಾರದ ಜಿಲ್ಲೆ. ದೇಶದಲ್ಲಿ ಮೂರು ಬಂಗಾರದ ನಿಕ್ಷೇಪಗಳಿದ್ದೂ, ಅವುಗಳು ಕರ್ನಾಟಕದಲ್ಲಿವೆ. ಕೋಲಾರ, ತುಮಕೂರು, ರಾಯಚೂರಿನಲ್ಲಿವೆ. ಕೋಲಾರದಲ್ಲಿ ಬರಗಾಲಕ್ಕೆ ತುತ್ತಾಗಿ ನೀರಾವರಿಗೆ ಸಮಸ್ಯೆ ಇತ್ತು. ಹೀಗಾಗಿ ಕಾಂಗ್ರೆಸ್ ಸರ್ಕಾರ ಕೆರೆಗಳಿಗೆ ನೀರು...

‘ಈ ಕಾರಣಕ್ಕೇ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ತನ್ನು ನಡೆಯಲು ಬಿಡಲಿಲ್ಲ’

ಕೋಲಾರ : ಕೋಲಾರದಲ್ಲಿ ಸತ್ಯಮೇವ ಜಯತೇ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಅದಾನಿಗೆ ಪ್ರಧಾನಿ ಮೋದಿ ಸಪೋರ್ಟ್ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ. ನಾನು ಸಂಸತ್ತಿನಲ್ಲಿ ಅದಾನಿ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ನನ್ನ ಮೈಕ್ ಆಫ್ ಮಾಡಿದ್ದರು. ನಾನು ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧವೇನು ಎಂದು...

‘ಪ್ರಧಾನಿಯವರ ಮೌನ ಈ ಸರ್ಕಾರ 40% ಸರ್ಕಾರ ಎಂದು ಒಪ್ಪಿಕೊಂಡಂತಾಗಿದೆ’

ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್‌ನಿಂದ ನಡೆದ ಸತ್ಯ ಮೇವ ಜಯತೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ರಾಜ್ಯದ ಕಾಂಗ್ರೆಸ್ ಪಕ್ಷ ಜನರಿಗೆ ನೇರ ಸಂದೇಶ ರವಾನಿಸಬೇಕು. ಪ್ರಧಾನಮಂತ್ರಿಗಳಿಗೆ ಸಂದೇಶ ರವಾನೆಯಾಗಬೇಕು. ಪ್ರಧಾನಮಂತ್ರಿಗಳು ಅದಾನಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ಹಣ ನೀಡುವುದಾದರೆ, ನಾವು ಕೂಡ ದೇಶದ ಜನರಿಗೆ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿದೆ....
- Advertisement -spot_img

Latest News

ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್ – ‘INDIA’ ಕೂಟದ ಆಡಳಿತದಲ್ಲೇ ಹೈ-ಅಕ್ರಮ! ಲಿಸ್ಟ್ ಔಟ್;

ನೀಟ್ ಪೇಪರ್ ಲೀಕ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆ ಬರಿ 'ರಾಜಕೀಯ ನಾಟಕ' ಎಂದು...
- Advertisement -spot_img