Bengaluru News: KPSC ಪರೀಕ್ಷೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದು, ಸೀಲ್ ತೆಗೆದಿದ್ದ ಪ್ರಶ್ನೆಪತ್ರಿಕೆ ಬಂಡಲ್ ಪತ್ತೆಯಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕಿದ್ದ KPSCಯು ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಲೋಪದೋಷಗಳು ಹಾಗೂ ಅವ್ಯವಸ್ಥೆಯ ಭ್ರಷ್ಟಕೂಪವಾಗಿ ಮಾರ್ಪಟ್ಟಿರುವುದು ಬಯಲಾಗಿದೆ. KPSC ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ...