ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬತ್ತಳಿಕೆಗೆ ಇನ್ನಷ್ಟು ಹೊಸ ಬಸ್‌ಗಳು ಸೇರ್ಪಡೆಯಾಗಲಿವೆ. ಈಗಾಗಲೇ ವಿವಿಧ ಮಾದರಿಯ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಅವುಗಳ ಜತೆಗೆ ಪಲ್ಲಕ್ಕಿ (ನಾನ್ ಎಸಿ ಸ್ಲೀಪರ್) ಹಾಗೂ ವಿದ್ಯುತ್ ಚಾಲಿತ ಬಸ್‌ಗಳು ಕೂಡ ಶೀಘ್ರದಲ್ಲೇ ರಸ್ತೆಗಿಳಿಯಲಿವೆ.
ಮುಂದಿನ ವರ್ಷದ ಮಾರ್ಚ್ ವೇಳೆಗೆ, ಕೆಎಸ್‌ಆರ್‌ಟಿಸಿ ಮತ್ತು...
ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ, ನಗರದ ನಾಲ್ಕು ದಿಕ್ಕುಗಳಲ್ಲಿ ತಲಾ ಎಂಟು ಎಕರೆ ಜಾಗವನ್ನು ಕೋರಲಾಗಿದೆ.
ಪ್ರಸ್ತುತ ಇರುವ ಹಿಂಕಾಳ್, ಕುವೆಂಪುನಗರ ಮತ್ತು ಸತ್ತಗಳ್ಳಿ ಡಿಪೋಗಳ ಜೊತೆಗೆ, ಹುಣಸೂರು, ಟಿ. ನರಸೀಪುರ, ನಂಜನಗೂಡು...
ಕೆಎಸ್‌ಆರ್‌ಟಿಸಿ ಫ್ಲೈಬಸ್ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ, ಇಂದಿನಿಂದ ಕೆಎಂಎಫ್ ನಂದಿನಿ ಸ್ನ್ಯಾಕ್ಸ್ ಕಿಟ್ ಸಿಗಲಿದೆ. ಈ ಹೊಸ ಯೋಜನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಜನರ ಪ್ರಯಾಣವನ್ನು ಇನ್ನಷ್ಟು ಉತ್ತಮಗೊಳಿಸುವುದರ ಜತೆಗೆ ಏರ್‌ಪೋರ್ಟ್‌ಗೆ ತೆರಳುವ ಬಸ್‌ಗಳಲ್ಲೂ, ವಿಮಾನ ಪ್ರಯಾಣದ ಮಾದರಿಯಲ್ಲೇ ಆತಿಥ್ಯ ನೀಡಬೇಕೆಂಬ ಗುರಿಯೊಂದಿಗೆ ನಿರ್ಧಾರ...
ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳ ಮೇಲೆ ತಂಬಾಕು ಮತ್ತು ಪಾದರಕ್ಷೆಗಳ ಜಾಹೀರಾತು ಪ್ರಕಟಿಸಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮ KSRTC ನಿಗಮದ ನೈತಿಕ ಜವಾಬ್ದಾರಿಯನ್ನು ಪ್ರಶ್ನಿಸುವಂತಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಮಂಡ್ಯ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ಅವರ ನೇತೃತ್ವದಲ್ಲಿ ನಗರದ...
ಮೈಸೂರಿನ ಗೌರವಕ್ಕೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ಕೆಎಸ್‌ಆರ್‌ಟಿಸಿ ಮೈಸೂರು ನಗರ ಸಾರಿಗೆ ವಿಭಾಗಕ್ಕೆ ಕೇಂದ್ರ ಸರ್ಕಾರದಿಂದ 2025ರ “ಅವಾರ್ಡ್ ಆಫ್ ಎಕ್ಸಲೆನ್ಸ್ ಇನ್ ಅರ್ಬನ್ ಟ್ರಾನ್ಸ್‌ಪೋರ್ಟ್” ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿ ನಗರ ಸಾರಿಗೆಯಲ್ಲಿ ಕೈಗೊಂಡ ಅತ್ಯುತ್ತಮ ಯೋಜನೆಗಳ ವರ್ಗದಲ್ಲಿ ದೊರೆತಿದ್ದು, ಮೈಸೂರು ವಿಭಾಗದ ‘ಧ್ವನಿ ಸ್ಪಂದನ’ ಯೋಜನೆ ಅದಕ್ಕೆ ಕಾರಣವಾಗಿದೆ. ಈ ಯೋಜನೆ...
ಸಾರಿಗೆ ನೌಕರರಿಗೆ ಕಾದಿದೆ ಬಿಗ್ ಶಾಕ್. ಇನ್ಮುಂದೆ ಶಕ್ತಿ ಯೋಜನೆ ಬಗ್ಗೆ ಮಾತನಾಡಿದ್ರೆ ಹುಷಾರ್ ಅನ್ನೋಹಾಗಾಗಿದೆ. ರಾಜ್ಯದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಿರುವ ಸಾರಿಗೆ ನೌಕರರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ನಿಲುವು ತೆಗೆದುಕೊಂಡಿದೆ. ಮಹಿಳೆಯರ ಅಚ್ಚುಮೆಚ್ಚಿನ ಈ ಯೋಜನೆ ಕುರಿತು ಚಾಲಕರು, ನಿರ್ವಾಹಕರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ದೂರುಗಳು ಬಂದಿದ್ವು....
ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವಿಶೇಷ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 26ರಿಂದ ಆರಂಭವಾಗಿ 2,300 ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಆಯುಧ ಪೂಜೆಯ ಸಂದರ್ಭದಲ್ಲಿ ರಜೆಯಿರುವುದರಿಂದ ಸೆ.26, 27 ಮತ್ತು 30ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳ ಕಡೆಗೆ ಈ ಹೆಚ್ಚುವರಿ...
ಕರೆ ಕೊಟ್ಟಂತೆ ಆಗಸ್ಟ್ 5ರಿಂದಲೇ, ಸಾರಿಗೆ ನೌಕರರ ಮುಷ್ಕರ ಆರಂಭವಾಗಿದೆ. ಎಸ್ಮಾ ಕಾಯ್ದೆ ಪ್ರಯೋಗ, ರಜೆ ರದ್ದು, ವೇತನ ಕಡಿತಗೊಳಿಸುವ ಬೆದರಿಕೆಗಳಿಗೂ ಜಗ್ಗಿಲ್ಲ. ಒಂದೇ ಒಂದು ದಿನ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಹೇಳಿದ್ರೂ, ಸಾರಿಗೆ ನೌಕರರ ಒಕ್ಕೂಟ ತನ್ನ ಪಟ್ಟು ಬಿಟ್ಟಿಲ್ಲ.
ಆಗಸ್ಟ್ 4ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, 38 ತಿಂಗಳಿಗೆ ಬದಲಾಗಿ...
ಆಗಸ್ಟ್ 5ಕ್ಕೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಿಗಧಿಯಾಗಿದೆ. KSRTC, BMTC ನೌಕರರು ವೇತನ ಪರಿಷ್ಕರಣೆ, ವೇತನ ಹಿಂಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ. ಸಾರಿಗೆ ನೌಕರರ ಈ ಅನಿರ್ದಿಷ್ಟಾವಧಿ ಮುಷ್ಕರ ರಾಜ್ಯ ಸರ್ಕಾರದ ತಲೆ ಕೆಡಿಸಿದೆ.
ಈಗಾಗಲೇ ಸರ್ಕಾರ ಹಲವು ಸುತ್ತಿನ ಸಭೆ ನಡೆಸಿ ನೌಕರರನ್ನು ಸಮಾಧಾನಪಡಿಸಲು ಸರ್ಕಸ್ ಮಾಡಿದ್ದಾರೆ. ಆದರೆ...