ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿರುದ್ಧದ ಅಕ್ರಮ ಭೂಕಬಳಿಕೆ ಆರೋಪ, ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ತಿದೆ. ತುಮಕೂರು ಜಿಲ್ಲೆಯಾದ್ಯಂತ ಹಲವು ಪ್ರತಿಭಟನೆಗಳು ನಡೀತಿದ್ದು, ಇದೀಗ ಕೆಆರ್ ಎಸ್ ಪಕ್ಷ ಕೂಡ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ.
ಮಧುಗಿರಿ ತಾಲೂಕಿನ ತುಮ್ಮುಲು ಗ್ರಾಮ ವ್ಯಾಪ್ತಿಯಲ್ಲಿ, 40 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಭೂಪರಿವರ್ತನೆ ಮಾಡಲಾಗಿದೆ. ಸಾವಿರಾರು ಕೋಟಿ...