ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 100 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಪಕ್ಷದಲ್ಲಿ ಈಗ ತಮ್ಮ ಶಾಸಕರನ್ನೇ ತಮ್ಮಿಂದಲೇ ಖರೀದಿ ಮಾಡುವ ಸ್ಥಿತಿ ಉಂಟಾಗಿದೆ ಎಂಬುದು ಹಿಂದೆಂದೂ ಕಂಡಿರದ ಅವಮಾನಕರ ಪರಿಸ್ಥಿತಿ ಎಂದು ಆರೋಪಿಸಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕಾಂಗ್ರೆಸ್ ಸರ್ಕಾರವೇ? ಅಥವಾ ಸಮ್ಮಿಶ್ರ ಸರ್ಕಾರವೇ?...
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆಯಂತೆ. ಹಿರಿಯ ನಾಯಕರೊಬ್ಬರು ಸಿಎಂ ಆಗ್ತಾರಂತೆ. ಡಿಕೆಶಿ, ಜಾರಕಿಹೊಳಿ ಯಾರಿಗೂ ಸಿಎಂ ಪಟ್ಟ ಸಿಗೋದಿಲ್ವಂತೆ. ಹೀಗಂತ ಬೆಳಗಾವಿಯಲ್ಲಿ ಶಾಸಕ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನವೆಂಬರ್‌ನಲ್ಲಿ ಬ್ಲಾಕ್ ಹಾರ್ಸ್ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆಯವರೇ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನನ್ನ ಜೀವನದಲ್ಲಿ ಒಂದು ದಿನವಾದ್ರೂ ಸಿಎಂ ಅಗಬೇಕೆಂದು ಖರ್ಗೆ ಕುಳಿತಿದ್ದಾರೆ....
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಎಚ್ಚರಿಸಿದ್ದಾಯ್ತು. ನೋಟಿಸ್ ಕೊಟ್ಟು ಬಾಯಿ ಮುಚ್ಚಿಸೋ ಪ್ರಯತ್ನ ಮಾಡಿದ್ದಾಯ್ತು. ಮಾತಲ್ಲಿ ಎಷ್ಟೇ ಕ್ಲಾರಿಟಿ ಕೊಟ್ರು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ, ಸಿಎಂ ಬದಲಾವಣೆ ಕಿಚ್ಚು ಶಮನವಾಗುತ್ತಲೇ ಇಲ್ಲ. ಪೂರ್ಣಾವಧಿ ಸಿಎಂ ನಾನೇ ಅಂತಾ ಸಿದ್ದರಾಮಯ್ಯ ಹೇಳುತ್ತಲೇ ಇದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್...
ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಖರ್ಗೆ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವಯೋಸಹಜ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಯಿಂದಾಗಿ, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಮಲ್ಲಿಕಾರ್ಜುನ ಖರ್ಗೆ ದಾಖಲಾಗಿದ್ರು. ಸದ್ಯ, ಖರ್ಗೆ ಅವರಿಗೆ ಫೇಸ್ ಮೇಕರ್ ಅಳವಡಿಕೆ ಯಶಸ್ವಿಯಾಗಿದ್ದು, ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಹೃದಯ...
ಸಿಎಂ ಸಿದ್ದರಾಮಯ್ಯ 77ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮುಖ್ಯಮಂತ್ರಿಯ ಹುಟ್ಟುಹಬ್ಬಕ್ಕೆ ಹಲವಾರು ಗಣ್ಯರು, ರಾಜಕೀಯ ನಾಯಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಭಿಮಾನಿಗಳು ಸಿದ್ದರಾಮಯ್ಯ ಅವರ ಹೆಸರಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಜನಪ್ರಿಯ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಮುಖವಾಗಿ ಡಿಸಿಎಂ ಡಿಕೆ ಶಿವಕುಮಾರ್, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಶುಭಾಶಯದ...
ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ದಾಳ ಉರುಳಿಸುತ್ತಿದ್ದಾರೆ. ಮತ್ತೊಂದ್ಕಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೆಚ್ಚಿದೆ. ಇದರ ಜೊತೆಗೆ ಪ್ರಭಾವಿ ಸಚಿವರು ಒಬ್ಬರಿಗೆ ಒಂದೇ ಹುದ್ದೆ ಸಾಕು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಪಟ್ಟು ಹಿಡಿದಿದ್ದಾರೆ.
ದೆಹಲಿಯಲ್ಲಿ ಕುಳಿತು ವಿರೋಧಿ ಬಣಕ್ಕೆ, ಸಿದ್ದರಾಮಯ್ಯ ಚೆಕ್ ಮೇಟ್ ಇಡುವ ಕೆಲಸ ಮಾಡಿದ್ರು. ಇದ್ರಿಂದ ಡಿಕೆಶಿಗೆ ಮತ್ತು ಅವರ...
ನವದೆಹಲಿ : ರಾಜ್ಯದಲ್ಲಿ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಈ ಮೂಲಕ ಪಟ್ಟದ ಫೈಟ್ ಗೆ ಪೂರ್ಣ ವಿರಾಮ ನೀಡಿದ್ದಾರೆ.
ನವದೆಹಲಿಯಲ್ಲಿ ಹೈಕಮಾಂಡ್ ಭೇಟಿಗೂ ಮುನ್ನ ಸಂದರ್ಶನವೊಂದರಲ್ಲಿ ಮಾತಾನಾಡಿರುವ ಅವರು, ನಾನು ಡಿಕೆಶಿ ಇಬ್ಬರು ಹೈಕಮಾಂಡ್ ಆದೇಶ ಪಾಲಿಸಬೇಕು. ಡಿಕೆ ಶಿವಕುಮಾರ್ ಸಿಎಂ ಬದಲಾವಣೆಯ ಬಗ್ಗೆ ಕೇಳಿಲ್ಲ...
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದ್ಯ ಮುಡಾ ಹಗರಣದ ಚರ್ಚೆ ಜೋರಾಗಿ ನಡೆಯುತ್ತಿದೆ. ಮುಡಾ ಸಂಕಷ್ಟದ ಮಧ್ಯೆ ಇದೀಗ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಾಯಕರ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಐದರಿಂದ ಆರು ಸಚಿವರಿಗೆ ಕ್ಯಾಬಿನೆಟ್ನಿಂದ ಕೊಕ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಶುಕ್ರವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಂಪುಟ...
National News : ದೇಶದೆಲ್ಲೆಡೆ 77ರ ಸ್ವಾತಂತ್ರ್ಯ ಸಂಭ್ರಮ ಈ ವೇಳೆ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದರು. ಈ ವೇಳೆ ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಸಿಗೋಣ ಎಂದು ಹೇಳಿದರು. ಈ ಮಾತಿಗೆ ಮಲ್ಲಿಖಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ವರ್ಷ ಇದೇ ಕೆಂಪು ಕೋಟೆಯಿಂದ...
ಕೊಪ್ಪಳ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಲೆಕೆಟ್ಟಿದ್ದು, ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.
ಶನಿವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೃಹ ಸಚಿವರಾಗಿ ಕೆಲಸ ಮಾಡಿದ ಆರಗ...