Friday, November 14, 2025

mysuru breaking

ಮೈಸೂರಿನ ಅಧಿಕಾರಿಗಳಿಗೆ ಸಿಎಂ ಕಠಿಣ ಎಚ್ಚರಿಕೆ ಕೊಟ್ಟಿದ್ಯಾಕೆ ?

ಜನರನ್ನು ಕಚೇರಿಗಳಲ್ಲಿ ಅಲೆದಾಡಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರದಲ್ಲೇ ಕುಳಿತುಕೊಳ್ಳದೆ ತಾಲ್ಲೂಕು ಮಟ್ಟದಲ್ಲಿ ಜನರ ಅಹವಾಲು ಕೇಳಿ ತಕ್ಷಣ ಪರಿಹರಿಸಿ. ಸೂಚನೆ ಪಾಲಿಸದ ಅಧಿಕಾರಿಗಳ ಬಗ್ಗೆ ವರದಿ...

ಮೈಸೂರಿಗೆ ರಾಷ್ಟ್ರ ಪ್ರಶಸ್ತಿಯ ಗರಿ : ‘ಧ್ವನಿ ಸ್ಪಂದನ’ಗೆ ಕೇಂದ್ರದ ಗೌರವ!

ಮೈಸೂರಿನ ಗೌರವಕ್ಕೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ಕೆಎಸ್‌ಆರ್‌ಟಿಸಿ ಮೈಸೂರು ನಗರ ಸಾರಿಗೆ ವಿಭಾಗಕ್ಕೆ ಕೇಂದ್ರ ಸರ್ಕಾರದಿಂದ 2025ರ “ಅವಾರ್ಡ್ ಆಫ್ ಎಕ್ಸಲೆನ್ಸ್ ಇನ್ ಅರ್ಬನ್ ಟ್ರಾನ್ಸ್‌ಪೋರ್ಟ್” ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ನಗರ ಸಾರಿಗೆಯಲ್ಲಿ ಕೈಗೊಂಡ ಅತ್ಯುತ್ತಮ ಯೋಜನೆಗಳ ವರ್ಗದಲ್ಲಿ ದೊರೆತಿದ್ದು, ಮೈಸೂರು ವಿಭಾಗದ ‘ಧ್ವನಿ ಸ್ಪಂದನ’ ಯೋಜನೆ ಅದಕ್ಕೆ ಕಾರಣವಾಗಿದೆ. ಈ ಯೋಜನೆ...

ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಅಂಧರ್!

ಮೈಸೂರು: ಭ್ರೂಣ ಪತ್ತೆ ಹಾಗೂ ಹತ್ಯೆ ಎಂಬ ಕಾನೂನುಬಾಹಿರ ಕೃತ್ಯಕ್ಕೆ ಮೈಸೂರಿನಲ್ಲೊಂದು ಗ್ಯಾಂಗ್‌ ಬಲೆಯೊಡ್ಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮೆಲ್ಲಹಳ್ಳಿ ಸಮೀಪದ ಹುನಗನಹಳ್ಳಿ ಗ್ರಾಮದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ದಾಳಿ ನಡೆಸಿ, ಓರ್ವ ಮಹಿಳೆ ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಈ ಬಂಗಲೆಯಲ್ಲೇ ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಭ್ರೂಣ ಎಂದು ತಿಳಿದರೆ ಹತ್ಯೆ...

ದಶಕದ ಮೈಸೂರು ಪಾಲಿಕೆ ಕನಸು ಭಗ್ನ: ಗ್ರೇಡ್-1 ಯೋಜನೆ ಸ್ಥಗಿತ

ಮೈಸೂರು: ಆರ್ಥಿಕ ಇಲಾಖೆಯ ಅನುಮೋದನೆ ಲಭ್ಯವಾಗದ ಹಿನ್ನೆಲೆಯಲ್ಲಿ, ಮೈಸೂರು ಮಹಾನಗರ ಪಾಲಿಕೆಯನ್ನು ಈ ವರ್ಷ ಗ್ರೇಡ್–1 ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಸರ್ಕಾರದ ಯೋಜನೆ ಕೈಬಿಡಲಾಗಿದೆ. ಮೈಸೂರನ್ನು ಬೆಂಗಳೂರಿನ ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿತ್ತು. ಈ ಯೋಜನೆಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಆಸಕ್ತಿ...

ಮೈಸೂರಿನಲ್ಲಿ ಕಳ್ಳರ ರಾಜ! ಒಂದೇ ರಾತ್ರಿ 19 ಲಕ್ಷ ಕಳವು

ನಗರದ ವಿವಿಧೆಡೆ ಸರಣಿ ಕಳವು ಪ್ರಕರಣಗಳು ವರದಿಯಾಗಿವೆ. ದಿವಾನ್ಸ್ ರಸ್ತೆಯ ಮೆಡಿಕಲ್ ಸ್ಟೋರ್‌ಗಳಲ್ಲಿ ಕಳ್ಳರು ಸರಣಿ ದಾಳಿ ನಡೆಸಿ, ₹9 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್‌, ನಾಣ್ಯಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ದಾಸೇಗೌಡ ಅವರ ಗೌಡ್ರು ವೆಟರ್ನರಿ ಮತ್ತು ಪೆಟ್ ಮೆಡಿಕಲ್ಸ್ ಹಾಗೂ ಶ್ರೀನಿವಾಸ ಮೆಡಿಕಲ್ಸ್ ಅಂಗಡಿಗಳಲ್ಲಿ ಈ ಕಳವು ನಡೆದಿದ್ದು, ಗೌಡ್ರು ಮೆಡಿಕಲ್ಸ್‌ನಿಂದ...

ಮೈಮುಲ್‌ ಎಲೆಕ್ಷನ್‌ಗೆ ಅವಿರೋಧ ಆಯ್ಕೆಗೆ ಮಹದೇವಪ್ಪ ಸೂಚನೆ

ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಎಚ್‌.ಡಿ. ಕೋಟೆಯ ಕೆ.ಈರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಸೂಚಿಸಿದ್ದಾರೆ. ಸಚಿವರ ಅಧ್ಯಕ್ಷತೆಯಲ್ಲಿ ನಿರ್ದೇಶಕರ ಸಭೆ ನಡೆಸಲಾಗಿದೆ. ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಉಳಿದ ಅವಧಿಗೆ ಈರೇಗೌಡರಿಗೆ...

ಮೈಸೂರಲ್ಲಿ ಮೊದಲ ಬಾರಿಗೆ ಅದ್ದೂರಿ ಕನ್ನಡ ರಾಜ್ಯೋತ್ಸವ!

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಗರದ ಓವೆಲ್ ಮೈದಾನದಲ್ಲಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ತಿಳಿಸಿದರು. ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯೋತ್ಸವ ದಿನದ ಬೆಳಿಗ್ಗೆ 9 ಗಂಟೆಗೆ ಸಮಾಜ ಕಲ್ಯಾಣ...

ಮೃಗಾಲಯ ಇತಿಹಾಸದಲ್ಲೇ ದಾಖಲೆ ಬರೆದ ಕಲೆಕ್ಷನ್ ಮೊತ್ತ!

ಮೈಸೂರು ದಸರಾ ನಾಡಹಬ್ಬದ ಸಂಭ್ರಮದ ನಡುವೆ ಈ ಬಾರಿ ಚಾಮರಾಜೇಂದ್ರ ಮೃಗಾಲಯ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಮೆರೆಯಿತು. ಹಬ್ಬದ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಜನಸಾಗರದಿಂದಾಗಿ ಮೃಗಾಲಯದಲ್ಲಿ ದಾಖಲೆಯ ಮಟ್ಟದ ಆದಾಯ ಸಂಗ್ರಹವಾಗಿದ್ದು, ಒಟ್ಟು 191.37 ಲಕ್ಷ ಗಳಿಸಲಾಗಿದೆ. ಇದು ಕಳೆದ ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಮೊತ್ತವಾಗಿದ್ದು ಹೊಸ ದಾಖಲೆ ನಿರ್ಮಿಸಿದೆ. ದಸರಾ ಅವಧಿಯಲ್ಲಿ 1.56...

ಮೈಸೂರು ಬರ್ಬರ ಕೊಲೆಗೆ ಟ್ವಿಸ್ಟ್ : 5 ಆರೋಪಿಗಳು ಶರಣು!

ದೊಡ್ಡಕೆರೆ ಮೈದಾನದ ಬಳಿ ನಡೆದ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಐವರು ಮಂಗಳವಾರ ತಡರಾತ್ರಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಮನೋಜ್ ಅಲಿಯಾಸ್ ಬಿಗ್ ಶೋ, ಮಲ್ಲಿಕಾರ್ಜುನ ಅಲಿಯಾಸ್ ಹಾಲಪ್ಪ ಸೇರಿದಂತೆ ಐವರು ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಚೆಗೆ ನಡೆದ ಕಾರ್ತಿಕ್ ಹತ್ಯೆ ಪ್ರಕರಣದ ನಂತರ ಉಂಟಾದ ಘಟನೆಗಳ ಸರಪಳಿಯೇ ವೆಂಕಟೇಶ್ ಹತ್ಯೆಗೆ ಕಾರಣವಾಗಿದೆ ಎಂದು...

ಮೈಸೂರಲ್ಲಿ ಹಾಡುಹಗಲೇ ಬರ್ಬರ ಹತ್ಯೆ : ಹಳೆಯ ವೈಷಮ್ಯವೇ ಕಾರಣ?

ಮೈಸೂರು ವಸ್ತುಪ್ರದರ್ಶನ ಮೈದಾನದ ಸಮೀಪ ಮಧ್ಯಾಹ್ನ ನಡೆದ ಭೀಕರ ಘಟನೆ ನಗರವನ್ನೇ ಬೆಚ್ಚಿಬೀಳಿಸಿದೆ. ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಮುಖಾಮುಚ್ಚಿ, ಅಲಿಯಾಸ್ ಗಿಲಿಗಿಲಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ವೆಂಕಟೇಶ್ ಕಾರಿನಲ್ಲಿದ್ದಾಗ ಯುವಕರ ಗುಂಪೊಂದು ಲಾಂಗ್...
- Advertisement -spot_img

Latest News

ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಕ್ಕಿಲ್ಲ – ನ. 24ಕ್ಕೆ ವಿಚಾರಣೆ ಮುಂದೂಡಿಕೆ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...
- Advertisement -spot_img