ಕನ್ನಡದ ಮೊಟ್ಟ ಮೊದಲ ಅನಿಮೇಟೆಡ್ ಚಿತ್ರ ‘ಮಹಾವತಾರ್ ನರಸಿಂಹ’ ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಈ ಸಿನಿಮಾವನ್ನು ನಿರ್ಮಿಸಿದ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಇದನ್ನು ಆಸ್ಕರ್ ಪ್ರಶಸ್ತಿಯ ಪರಿಗಣನೆಗೆ ಸಲ್ಲಿಸಿ ಮಹತ್ವಾಕಾಂಕ್ಷೆಯ ಹೆಜ್ಜೆ ಇಟ್ಟಿದೆ.
ಈ ಹಿಂದೆ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಅಧ್ಯಾಯ 1' ಚಿತ್ರವನ್ನು ಆಸ್ಕರ್ ರೇಸ್‌ಗೆ ಕಳುಹಿಸಿದ್ದ...