ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ನೀಡಲಾಗುವ ತೆರಿಗೆ ಹಂಚಿಕೆ ಹಾಗೂ ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಆದ್ರೆ 2026–27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೀಡಲಾಗುವ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅಂದಾಜಿನ ಪ್ರಕಾರ, 2026–27ನೇ ಸಾಲಿನಲ್ಲಿ...
ಕೃಷಿ ವಲಯವನ್ನು ಬಲಪಡಿಸಲು, ಕೇಂದ್ರ ಸರ್ಕಾರವು ಈ ಬಜೆಟ್‌ನಲ್ಲಿ ಮಾಸ್ಟರ್ ಫಾರ್ಮ್ ಪರಿಕಲ್ಪನೆಗೆ ಗಮನಾರ್ಹ ಒತ್ತು ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಘೋಷಣೆ ಮಾಡಿದ್ದು, ಕರಾವಳಿ ಗೋಡಂಬಿ ಮತ್ತು ತೆಂಗಿನಕಾಯಿ ರೈತರು, ಗುಡ್ಡಗಾಡು ಪ್ರದೇಶಗಳಲ್ಲಿ ಏಪ್ರಿಕಾಟ್, ವಾಲ್ನಟ್ ಮತ್ತು ಬಾದಾಮಿ ಬೆಳೆಗಾರರು ಅಥವಾ ಔಷಧೀಯ ಕೃಷಿಯಲ್ಲಿ ತೊಡಗಿರುವ ರೈತರು ಸೇರಿದಂತೆ, ಪ್ರತಿಯೊಂದು...
ಗುಂಡು ಇಲ್ಲ, ಬಾಂಬ್ ಕೂಡ ಇಲ್ಲ. ಆದರೆ ಪರಿಣಾಮ ಮಾತ್ರ ಯುದ್ಧದಷ್ಟೇ ಗಂಭೀರ. ಇಂದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯ ಎಫೆಕ್ಟ್ ಆಗಿದೆ. ಭಾರತವು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಜವಳಿ ಉದ್ಯಮಗಳ ಮೇಲೆ ಪರಿಣಾಮಕಾರಿ ಆರ್ಥಿಕ ದಾಳಿ ಆರಂಭಿಸಿದೆ. ಈ ಮೂಲಕ ಭಾರತದ ಜವಳಿ ಉದ್ಯಮಕ್ಕೆ ಉತ್ತೇಜನ ನೀಡಿದೆ.
ಕೇಂದ್ರ...
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1, ಭಾನುವಾರದಂದು 2026-27ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗೆ 11ಗಂಟೆಗೆ ಸಂಸತ್ನ ಜಂಟಿ ಅಧಿವೇಶನದಲ್ಲಿ ಸಚಿವೆ ಬಜೆಟ್ ಮಂಡನೆ ಆರಂಭಿಸಿದ್ದು, ಖನಿಜ ಸಮೃದ್ಧ ರಾಜ್ಯಗಳು ಅಪರೂಪದ ಖನಿಜ ಕಾರಿಡಾರ್‌ಗಳನ್ನು ಸ್ಥಾಪಿಸಲು ಸಹಾಯ ಮಾಡುವ ಪ್ರಸ್ತಾಪದ ಕುರಿತು ನಿರ್ಮಲಾ ಸೀತಾರಾಮನ್ ಮಾತನಾಡಿದರು.
ಸರ್ಕಾರವು...
2026 ರ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ತಮ್ಮ ಬಜೆಟ್ ಭಾಷಣದ ಸಮಯದಲ್ಲಿ, ಸರ್ಕಾರವು ಸ್ವಾವಲಂಬಿ ಭಾರತಕ್ಕಾಗಿ ತನ್ನ ಖಜಾನೆಯನ್ನು ತೆರೆದಿದೆ. ಹಣಕಾಸು ಸಚಿವರು ಐದು ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ವಾರಾಣಸಿ ಮತ್ತು ಪಾಟ್ನಾದಲ್ಲಿ ಹಡಗು ದುರಸ್ತಿ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು. ಸೀಪ್ಲೇನ್ VGF ಯೋಜನೆಯನ್ನು ಪ್ರಾರಂಭಿಸಲಾಗುವುದು.
25...
2026 ರ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.
ತಮ್ಮ ಬಜೆಟ್ ಭಾಷಣದಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ. ಮದ್ಯ ಮತ್ತು ಸಿಗರೇಟ್‌ಗಳು ಅಗ್ಗವಾಗಲಿವೆ. ಶೂಗಳು ಸಹ ಅಗ್ಗವಾಗಲಿವೆ. ಜವಳಿ ರಫ್ತು ಕೂಡ ಅಗ್ಗವಾಗಲಿದೆ. ಬ್ಯಾಟರಿಗಳು ಸಹ ಅಗ್ಗವಾಗಲಿವೆ ಎಂದರು.
ಈಶಾನ್ಯಕ್ಕೆ 4,000 ಇ-ಬಸ್‌ಗಳನ್ನು ಒದಗಿಸಲಾಗುತ್ತಿದೆ. ಯಾತ್ರಿಕರಿಗೆ ವಿಶೇಷ ಸೌಲಭ್ಯಗಳನ್ನು...
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿದೆ. ಪಂಚರಾಜ್ಯಗಳ ಚುನಾವಣಾ ವಾತಾವರಣದ ನಡುವೆ ಮಂಡನೆಯಾಗುತ್ತಿರುವ ಈ ಬಜೆಟ್‌ನಲ್ಲಿ ದಕ್ಷಿಣ ಭಾರತದ ಆರ್ಥಿಕ ಶಕ್ತಿ ಕರ್ನಾಟಕಕ್ಕೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಜಿಎಸ್‌ಟಿ ಪಾಲಿನ ಅಸಮಾನತೆ ಸರಿಪಡಿಸುವುದು ಹಾಗೂ...
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ವರ್ಷದ ಆರ್ಥಿಕ ಸಮೀಕ್ಷೆಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇಕಡ 6.8ರಿಂದ 7.2ಕ್ಕೆ ಹೆಚ್ಚಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಪ್ರಬಲವಾಗಿರುವುದು ಹಾಗೂ ಸರ್ಕಾರದ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ವೇಗಕ್ಕೆ ಪುಷ್ಟಿ...
ಫೋರ್ಬ್ಸ್ ಮ್ಯಾಗಜಿನ್ 2025ರ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದ ಅತ್ಯಂತ ಪ್ರಭಾವಿ ಮಹಿಳೆಯಾಗಿ ಅಗ್ರಸ್ಥಾನ ಪಡೆದಿದ್ದಾರೆ.
ಭಾರತದಿಂದ ಈ ಪಟ್ಟಿಯಲ್ಲಿ ಮೂವರು ಮಹಿಳೆಯರು ಸ್ಥಾನ ಪಡೆದುಕೊಂಡಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 24ನೇ ಸ್ಥಾನ, HCL ಟೆಕ್ನಾಲಜೀಸ್ CEO ರೋಶನಿ...
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಹಗುರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಧಾರವಾಡದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಮಹಿಳಾ ಸದಸ್ಯೆಯರು, ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ...
Spiritual: ಪರ್ತಗಾಳಿಮಠದ ಶ್ರೀಗಳಾದ ವಿದ್ಯಾಧೀಶತೀರ್ಥರು ವಚನಾಮೃತ ಕಾರ್ಯಕ್ರಮದಲ್ಲಿ ಹಲವು ಹಿತ ವಚನಗಳನ್ನು ಹೇಳುತ್ತಾರೆ. ಅದೇ ರೀತಿ 1 ಕಥೆಯನ್ನು ಹೇಳುವ ಮೂಲಕ, ನಮ್ಮ ಮಕ್ಕಳಿಗೆ ನಾವು...