ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಹೆಂಡತಿಯ ಕೂದಲು ಹಿಡಿದು ರಸ್ತೆಯಲ್ಲೇ ಥಳಿಸಿ ಬಳಿಕ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು..ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರ ಬಳಿ ಕುಡಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಹೆಂಡತಿಯನ್ನು ನಡುರಸ್ತೆಯಲ್ಲೇ ಥಳಿಸುತ್ತಿದ್ದ. ಹೆಂಡತಿಯ ಕೂದಲು ಹಿಡಿದು ದರದರನೇ ಎಳೆದುಕೊಂಡು ಹೋಗಿ ಹಣ್ಣಿನ ಅಂಗಡಿ ಬಳಿ ನೆಲಕ್ಕೆ...