ಹಾಸನ : ನಗರದ ರೈಲ್ವೆ ಮೇಲ್ಸೇತುವೆ ಎರಡು ಪಥದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ, ಹಾಸನಾಂಬ ಜಾತ್ರಾ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಿಂದ ಎನ್.ಆರ್.ವೃತ್ತದವರೆಗೆ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ ಹಾಸನಾಂಬ ದೇವಿ ದರ್ಶನಕ್ಕೆ...
ಹಾಸನ:ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ಈ ಸೇತುವೆ ಕಳಪೆ ಕಾಮಗಾರಿಯಿಂದ ಸುದ್ದಿಯಾಗಿದ್ದ ಹಂಗರಹಳ್ಳಿ ರೈಲ್ವೇ ಮೇಲ್ ಸೇತುವೆಯ ತಡೆ ಗೋಡೆ ಮತ್ತೊಮ್ಮೆ ಕುಸಿದು ಅಪಾಯದ ಅಂಚಿಗೆ ತಲುಪಿದೆ.
ಹಾಸನ ಮೈಸೂರು ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಆಡಚಣೆಯಾಗಿದ್ದ ರೈಲ್ವೆ ಹಳಿಗೆ ಅಡ್ಡಲಾಗಿ ಈ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿತ್ತು.ನಿರ್ಮಾಣ ಹಂತದಲ್ಲಿ ಕಳಪೆ ಕಾಮಗಾರಿಯಿಂದಾಗಿ ಸುದ್ದಿಯಾಗಿದ್ದ...