ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ ದಿನ ಸಂಜೆ ಇತರ ನ್ಯಾಯಮೂರ್ತಿಗಳನ್ನು ಡಿನ್ನರ್‌ಗೆ ಕರೆದೊಯ್ದು, ಉತ್ತಮ ವೈನ್ ಕೊಡಿಸಿದ್ದೆ ಎಂದು ನಿವೃತ್ತ ಸಿಜೆಐ ರಂಜನ್ ಗೊಗೊಯ್ ಅವರು ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದರು. ‘ಐತಿಹಾಸಿಕ ಅಯೋಧ್ಯೆ ತೀರ್ಪಿನ ಸಂಭ್ರಮಾಚರಣೆ ಎಂದು ಫೋಟೋ ಶೀರ್ಷಿಕೆಯಲ್ಲಿ ಬರೆದಿದ್ದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವಿವಾದಾತ್ಮಕ ವಿಷಯದ ಕುರಿತು ತೀರ್ಪು...