ವಾಯುಮಾಲಿನ್ಯ ಭೀಕರ ಪ್ರಮಾಣಕ್ಕೆ ತಲುಪುತ್ತಿರುವ ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. “ನಾನು ದೆಹಲಿಯಲ್ಲಿ ಮಾತ್ರ ಎರಡು ದಿನ ಇದ್ದರೆ ಸಾಕು, ನನಗೆ ಅಲರ್ಜಿ ಸಮಸ್ಯೆ ಕಾಣಿಸುತ್ತದೆ” ಎಂದು ಹೇಳಿದ್ದು, ಅಲ್ಲಿನ ವಾಯುಮಾಲಿನ್ಯದ ತೀವ್ರತೆಯನ್ನು ತಿಳಿಸಿದ್ದಾರೆ.
ಇಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಗಡ್ಕರಿ ಮಾತನಾಡಿದ್ದಾರೆ. ದೆಹಲಿಯ ವಾಯುಮಾಲಿನ್ಯಕ್ಕೆ ವಾಹನಗಳು...