ಇನ್ಮುಂದೆ ವೃದ್ದರ ತಂಟೆಗೆ ಹೋದ್ರೆ ಹುಷಾರ್ .... ಯಾಕಂದ್ರೆ ರಾಜ್ಯದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಇನ್ನುಮುಂದೆ ಪೊಲೀಸರ ನೇರ ‘ಆಸರೆ’ ದೊರೆಯಲಿದೆ. ಸಮುದಾಯ ಪೊಲೀಸ್ ಪರಿಕಲ್ಪನೆಯಡಿಯಲ್ಲಿ ರಾಜ್ಯ ಪೊಲೀಸ್ ಇಲಾಖೆ ವಿನೂತನವಾದ ‘ಆಸರೆ’ ಯೋಜನೆಯನ್ನು ಜಾರಿಗೆ ತಂದಿದ್ದು, ಕಷ್ಟಕಾಲದಲ್ಲಿ ನಾವು ನಿಮ್ಮ ಜೊತೆಯಲ್ಲಿದ್ದೇವೆ ಎಂಬ ಭರವಸೆಯನ್ನು ವೃದ್ಧರಿಗೆ ನೀಡುವ ಉದ್ದೇಶ...