ಬೆಳಗಾವಿ: ಪ್ರಸ್ತುತ, ಸಾಮಾಜಿಕ ಮಾಧ್ಯಮ ಸದ್ಬಳಕೆಗಿಂತ ದುರ್ಬಳಕೆ ಕುರಿತಾಗಿಯೇ ಹೆಚ್ಚು ಚರ್ಚೆಗೀಡಾಗುತ್ತಿದೆ. ಆದರೆ, ಇಲ್ಲೊಬ್ಬರ ಬಾಳಿಗೆ ಸಾಮಾಜಿಕ ಮಾಧ್ಯಮವೇ ಪ್ರೇರಣೆ ನೀಡಿದೆ. 'ನನ್ನ ಬದುಕೇ ಮುಗಿದ್ಹೋಯ್ತು' ಎಂದು ಭಾವಿಸಿದ್ದ ವ್ಯಕ್ತಿ, ಇಂದು ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದಾರೆ.
ಇದು ಬೆಳಗಾವಿ ತಾಲ್ಲೂಕಿನ ಹಲಭಾವಿಯ 44ನೇ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಬಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿರುವ ಶ್ರೀಕಾಂತ ದೇಸಾಯಿ ಅವರ...