ಧರ್ಮಸ್ಥಳ ಪ್ರಕರಣ ಮತ್ತೊಮ್ಮೆ ರಾಜಕೀಯ ತಾಪಮಾನ ಏರಿಸಿದೆ. ದೂರುದಾರರೇ ಆರೋಪಿಗಳಾಗಿ ಹೊರಬಂದಿರುವ ಚಾರ್ಜ್ಶೀಟ್ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಚ್ಚರಿಯ ಬಾಂಬ್ ಸಿಡಿಸಿದ್ದಾರೆ. ಧರ್ಮಸ್ಥಳದ ವಿರುದ್ಧ ನಡೆದ ಪಿತೂರಿಗೆ ಯಾರು ಕಾರಣ ಅನ್ನೋ ಮಾಹಿತಿಯನ್ನ ಡಿಕೆಶಿ ಬಿಚ್ಚಿದ್ದಾರೆ
ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ನಾನು ಅಂದೇ ಧೈರ್ಯದಿಂದ ಹೇಳಿದ್ದೆ ಎಂದು ಡಿಕೆ ಶಿವಕುಮಾರ್ ಅಧಿವೇಶನದಲ್ಲಿ...
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಮಧ್ಯೆ, ರಾಜ್ಯ ಕಾಂಗ್ರೆಸ್ನಲ್ಲಿ “ಡಿನ್ನರ್ ಪಾಲಿಟಿಕ್ಸ್” ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಬಳಿಕ ಇದೀಗ ಬೆಳಗಾವಿಯಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಸೇರಿಕೊಂಡಿರುವ ''ಡಿನ್ನರ್ ಮೀಟಿಂಗ್'' ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಅಹಿಂದ ಶಕ್ತಿ ಕೇಂದ್ರ ಎಂದು ಪರಿಗಣಿಸಲಾದ ಈ ನಾಯಕರ ಹಾಜರಾತಿ ರಾಜಕೀಯ ನಿರೀಕ್ಷೆಗಳನ್ನು...
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪ್ರಶ್ನೆಗಳಲ್ಲಿ ಗಂಭೀರತೆ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಲಬುರಗಿಯಲ್ಲಿ ತೊಗರಿ ಪಾರ್ಕ್ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಬೆಲೆ ಪಾಲಿನ ಅನಿಶ್ಚಿತತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿದ ಬೆಳೆಗಳಿಗೆ ಸರಿಯಾದ...
ಏಕಾಏಕಿ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದು ಸರಿಯಾಗಿದೆ. ಒಂದೇ ಪಕ್ಷದಲ್ಲಿದ್ದೇವೆ. ಇದೆಲ್ಲ ಸ್ವಾಭಾವಿಕ. ಇಲ್ಲಿ ಯಾರು ಕೂಡ ಶಾಶ್ವತವಲ್ಲ. 30 ತಿಂಗಳ ನಂತರ ಬಿಡಬೋದು...
ಏಕಾಏಕಿ ನಿನ್ನೆ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡೋದು ನಿಶ್ಚಯ ಆದಂತಿದೆ. ಅವರ ಮಾತಿಂದ ನನಗೆ ಹಾಗೆ ಅನಿಸುತ್ತಿದೆ. ರಾಜೀನಾಮೆಗೆ ಕ್ಷಣಗಣನೆ ಶುರುವಾದಂತೆ ಕಾಣುತ್ತಿದೆ. ವೈರಾಗ್ಯದ ಮಾತು ಕೇಳಿದ್ರೆ ಜನವರಿಯಲ್ಲಿ ಸಿದ್ದರಾಮಯ್ಯ ಕುರ್ಚಿ ಬಿಡ್ತಾರೆ ಅಂತ...
ರಾಜ್ಯ ಕಾಂಗ್ರೆಸ್ ನಲ್ಲಿ ಅನೇಕ ಊಹಾಪೋಹಗಳಿಗೆ ಹರಿದಾಡುತ್ತಿವೆ. ಈ ಮದ್ಯೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 'ಬ್ರೇಕ್ಫಾಸ್ಟ್ ಮೀಟಿಂಗ್’ ಬಗ್ಗೆ ತೆರೆ ಎಳೆದಿದ್ದಾರೆ. ಡಿಕೆಶಿ ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಬಣ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಬ್ರೇಕ್ಫಾಸ್ಟ್ ಮೀಟಿಂಗ್’ ಕುರಿತಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದ ಗುಂಪುಗಾರಿಕೆಯ ಸುದ್ದಿಗಳನ್ನು ಅವರು ತಳ್ಳಿಹಾಕಿದ್ದಾರೆ.
ಸೋಮವಾರ...
ರಾಜ್ಯ ರಾಜಕೀಯದಲ್ಲಿ ಕುರ್ಚಿ ಗುದ್ದಾಟ ಜೋರಾಗಿದೆ. ಏನು ಗೊತ್ತಿಲ್ಲದ ಹಾಗೆ ಸಿದ್ದರಾಮಯ್ಯ ಹಾಗು ಡಿಕೆಶಿ ಒಟ್ಟಿಗೆ ಮುಖಾಮುಖಿಯಾಗಿ ಬ್ರೇಕ್ ಪಾಸ್ಟ್ ಮೀಟಿಂಗ್ ಮಾಡಿದ್ದಾರೆ. ಈ ಬಗ್ಗೆ ಮಡಿಕೇರಿ ಶಾಸಕ ಮಂತರ್ಗೌಡ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಇಬ್ಬರು ಹೈಕಮಾಂಡ್ ಏನ್ ತೀರ್ಮಾನ ಮಾಡ್ತಾರೋ ಅದಕ್ಕೆ ಬದ್ಧರಿದ್ದೇವೆ ಅಂತ ಈಗಾಗಲೇ ಹೇಳಿದ್ದಾರೆ ಇಬ್ಬರು...
ರಾಜ್ಯದ ರಾಜಕೀಯದಲ್ಲಿ ನಡೆಯುತ್ತಿರುವ ಅಧಿಕಾರ ಪೈಪೋಟಿ ಇನ್ನೂ ಎರಡು–ಮೂರು ತಿಂಗಳು ಮುಂದುವರಿಯಲಿದೆ ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ವ್ಯಂಗ್ಯ ಚಾಟಿ ಹಾರಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರಾಜ ಅರಸು ಅವರ ರೆಕಾರ್ಡ್ ಬ್ರೇಕ್ ಮಾಡಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಅದೇ ಸಮಯದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ‘ನನ್ನ ರೆಕಾರ್ಡ್ ಹೇಗೆ ಬ್ರೇಕ್ ಮಾಡ್ತೀರೋ...
ರಾಜ್ಯ ಕಾಂಗ್ರೆಸ್ನಲ್ಲಿ ದಿನಗಳಿಂದ ಜೋರಾಗಿದ್ದ ಅಧಿಕಾರ ಹಂಚಿಕೆ ಗೊಂದಲಗಳಿಗೆ ತೆರೆ ಎಳೆಯಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡೆಸಿದ ಬ್ರೇಕ್ಫಾಸ್ಟ್ ಮೀಟಿಂಗ್ ಹಾಗೂ ಜಂಟಿ ಪತ್ರಿಕಾಗೋಷ್ಠಿ ಹೊಸ ಪ್ರಶ್ನೆಗಳನ್ನು ಹುಟ್ಟಿಸಿವೆ. ಗೊಂದಲ ನಿವಾರಣೆಗಾಗಿ ಕರೆದ ಪತ್ರಿಕಾಗೋಷ್ಠಿಯಲ್ಲೇ ಇಬ್ಬರು ನಾಯಕರು ಹಲವು ಅನುಮಾನಗಳನ್ನು ಹಾಗೆಯೇ ಉಳಿಸಿ ಹೋಗಿದ್ದಾರೆ.
ಶನಿವಾರ ಬೆಳಿಗ್ಗೆ ಸಿದ್ದರಾಮಯ್ಯ ಅವರ ಕಾವೇರಿ...
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಪೈಪೋಟಿ ದಿನೇದಿನೇ ತೀವ್ರಗೊಳ್ಳುತ್ತಿದೆ. ಈ ನಡುವೆ, ಸಿಎಂ ಸಿದ್ದರಾಮಯ್ಯರನ್ನು ಗಾದಿಯಿಂದ ಕೆಳಗಿಳಿಸುವ ಯತ್ನಗಳು ನಡೆಯುತ್ತಿರುವುದರ ಕುರಿತು ಅಹಿಂದ ವರ್ಗ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನಾಯಕತ್ವ ಬದಲಾವಣೆಯ ಮಾತುಗಳು ಜೋರಾಗುತ್ತಿದ್ದಂತೆ ಅಹಿಂದ ಸಮುದಾಯದ ನಾಯಕರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯರ ಬೆನ್ನಿಗೆ ನಿಂತಿರುವ ಅಹಿಂದ ವರ್ಗ, ಅವರನ್ನು ಸ್ಥಾನದಿಂದ...