ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಕಿರು ಜಲಪಾತಗಳು, ಮಳೆಗಾಲದಲ್ಲಿ ಮತ್ತೆ ಜೀವ ಪಡೆಯುತ್ತವೆ. ಇಂಥಾ ಕಿರುಜಲಪಾತಗಳು ಮಲೆನಾಡು ಭಾಗದಲ್ಲಿ ವ್ಯಾಪಕವಾಗಿವೆ.
ಮನಸ್ಸಿಗೆ ಮುದ ನೀಡೋ ಕಿರುಜಲಪಾತಗಳು, ಅಷ್ಟೇ ಅಪಾಯಕಾರಿಯೂ ಹೌದು. ಸ್ವಲ್ಪ ಯಾಮಾರಿದ್ರೂ ಬದುಕುಳಿಯುವ ಚಾನ್ಸೇ ಇಲ್ಲ. ಹಾಸನ ಜಿಲ್ಲೆಯಲ್ಲೂ...