Health Tips: ಜೀವನ ಅಂದಮೇಲೆ ಹಲವಾರು ಆಲೋಚನೆಗಳಿರುತ್ತದೆ. ಚಿಂತೆ, ದುಃಖ ಎಲ್ಲವೂ ಇರುತ್ತದೆ. ಆದರೆ ಕೆಲವು ವಿಷಯಗಳ ಬಗ್ಗೆ ನಾವು ವಿನಾಕಾರಣ ಚಿಂತೆ ಮಾಡುತ್ತೇವೆ. ಮುಂದೊಂದು ದಿನ ನಮಗೇ ಅನ್ನಿಸುತ್ತೇವೆ. ನಾವು ಬೇಡವಾದ ವಿಚಾರಕ್ಕೆಲ್ಲಾ ಎಷ್ಟು ಚಿಂತೆ ಮಾಡಿದೆವಲ್ಲಾ ಎಂದು. ಇಂದು ನಾವು ಅಗತ್ಯವಿಲ್ಲದ ಚಿಂತೆಯಿಂದ ಹೇಗೆ ಪಾರಾಗುವುದು ಎಂದು ಹೇಳಲಿದ್ದೇವೆ.
ಚಿಂತೆ ಎಂಬ ಸಂತೆಯಿಂದ...
ಇಂದಿನ ಜೀವಮಾನದಲ್ಲಿ ಯುವಪೀಳಿಗೆಯ ಸಮಸ್ಯೆ ಅಂದ್ರೆ ಸ್ಟ್ರೆಸ್. ಕೆಲಸದ ಟೆನ್ಶನ್‌ನಿಂದ, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ಯುವಕ ಯುವತಿಯರು, 30 ದಾಟುತ್ತಿದ್ದಂತೆ, ಮುದುಕರ ರೀತಿಯಾಗಿಬಿಡುತ್ತಾರೆ. 31ನೇ ವಯಸ್ಸಿಗೆ ಬಿಳಿ ಕೂದಲು, ರೋಗ ರುಜಿನಗಳು ಅಂಟಿಕೊಳ್ಳುವ ಭಯವೆಲ್ಲ ಕಾಡಲು ಶುರುವಾಗಿದೆ. ಹೀಗೆಲ್ಲ ಯಾಕಾಗುತ್ತಿದೆಯಂದರೆ, ಎಲ್ಲದಕ್ಕೂ ಟೆನ್ಶನ್ ತೆಗೆದುಕೊಳ್ಳುವ ಸ್ವಭಾವ ಹೆಚ್ಚಾಗುತ್ತಿರುವ ಕಾರಣ. ಇದಕ್ಕೆ ಕಾರಣವೇನಂದ್ರೆ ಆಹಾರ ಸೇವನೆಯ...