ಯುವತಿಯ ಮನೆಯವರ ವಿರುದ್ಧ ಕೊಲೆ ಯತ್ನ ಆರೋಪಿಸಿ, ಎಸ್‌ಪಿ ಕಚೇರಿಯಲ್ಲೇ ನವ ಜೋಡಿ ಬೀಡುಬಿಟ್ಟಿದೆ. ಅಂತರ್ಜಾತಿ ವಿವಾಹವಾದ ಮಗಳ ಮೇಲೆ ಕುಟುಂಬಸ್ಥರು ಕೆಂಡಕಾರ್ತಿದ್ದು, ಯುವಕನ ಮನೆಗೆ ನುಗ್ಗಿ ದಾಂದಲೆ ಎಬ್ಬಿಸಿದ್ದಾರೆ. ಕೊಲೆ ಮಾಡಲು ಯತ್ನಿಸಿದ್ದರಂತೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಘಟನೆ ಸಂಭವಿಸಿದೆ.
ಇಡಿಗ ಸಮುದಾಯದ 19 ವರ್ಷದ ಸುಶ್ಮಿತಾ ಮತ್ತು 24 ವರ್ಷದ ದಲಿತ ಸಮುದಾಯದ...
ತುಮಕೂರಿನ ಹುಳಿಯಾರು ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿಯಾಗಿ ಮಂಜುನಾಥ್ ನೇಮಕಗೊಂಡಿದ್ದು, ಪೊಲೀಸರ ಬಿಗಿ ಭದ್ರತೆಯಲ್ಲಿ ಅಧಿಕಾರ ಸ್ವೀಕರಿಸಿದ್ರು. ಈ ಹಿಂದೆ ಇದೇ ಪಟ್ಟಣ ಪಂಚಾಯಿತಿಯಲ್ಲಿ ಮಂಜುನಾಥ್ ಕೆಲಸ ಮಾಡ್ತಿದ್ರು. ಇವರ ಕಾರ್ಯವೈಖರಿ ಬಗ್ಗೆ, ಸದಸ್ಯರು - ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ರು. ಇವರ ನಡವಳಿಯಿಂದ ಪಟ್ಟಣದಲ್ಲಿ, ಅನಾವಶ್ಯಕವಾಗಿ ಗಲಭೆಗಳು ಸೃಷ್ಟಿಯಾಗಿದ್ದವು. ಕೆಲ ದಾಖಲೆಗಳು ಕೂಡ ಕಾಣೆಯಾಗಿದ್ದವು...
ಸಿದ್ದರಾಮಯ್ಯ ಸಂಪುಟದಿಂದ ಕೆ.ಎನ್. ರಾಜಣ್ಣ ವಜಾ ಮಾಡಿದ್ದಕ್ಕೆ, ಕೇವಲ ಮತಗಳ್ಳತನದ ಬಗ್ಗೆ ನೀಡಿದ್ದ ಹೇಳಿಕೆ ಕಾರಣವಲ್ಲ. ಬೇರೆ ಕಾರಣವೂ ಇದೆ ಅಂತೆ. ಇದನ್ನ ಸ್ವತಃ ರಾಜಣ್ಣ ಅವರೇ ಒಪ್ಪಿಕೊಂಡಿದ್ದಾರೆ. ನಾನು ಹನಿಟ್ರ್ಯಾಪ್ ಪ್ರಯತ್ನದ ಬಗ್ಗೆಯೂ ಹೇಳಿದ್ದೆ. ಡಿಸಿಎಂ ಬಗ್ಗೆಯೂ ಹೇಳಿದ್ದೆ. ಸಂಪುಟದಿಂದ ವಜಾ ಮಾಡುವುದಕ್ಕೆ ಇದೆಲ್ಲಾ ಕಾರಣ ಅನಿಸುತ್ತೆ. ಹೀಗಂತ ಶಾಂಕಿಂಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ.
ಸಂಪುಟಕ್ಕೆ...
ತುಮಕೂರು ಜಿಲ್ಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬಹು ನಿರೀಕ್ಷಿತವಾದ, ಅಲಂಕಾರಿಕ ಜಲಚರ ಪ್ರಪಂಚವನ್ನು ಪರಿಚಯಿಸುವ ನವೀಕೃತ ಜಿಲ್ಲಾ ಮತ್ಸ್ಯಾಲಯ ಇದೀಗ ಲೋಕಾರ್ಪಣೆಯಾಗಿದ್ದು, ಜನರ ಕಣ್ಗಳನ್ನು ಸೆಳೆಯುತ್ತಿದೆ.
ಸೋಮವಾರದಂದು ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದ ಹತ್ತಿರ ನಿರ್ಮಿಸಲಾದ ಈ ಮತ್ಸ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಲೋಕಾರ್ಪಣೆ ಮಾಡಿದರು.
ಈ...
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ರಾತ್ರಿವೇಳೆ ಮನೆಯಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಡಿತದಿಂದ ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗ್ರಾಮದ ನಾಗರಾಜು ಮತ್ತು ಮಮತಾ ದಂಪತಿಗಳ ಮಗನಾದ ಅಶೋಕ್(6) ಎನ್ನುವ ಬಾಲಕ ಮನೆಯಲ್ಲಿ ಮಲಗಿದ್ದ ರಾತ್ರಿ 11.30 ರ ಸುಮಾರಿಗೆ ಹಾವು ಕಡಿದಿದೆ. ತಕ್ಷಣ ಪಾವಗಡ ಆಸ್ಪತ್ರೆಗೆ ಚಿಕಿತ್ಸೆಗಾಗಿ...