Spiritual: ಕರ್ನಾಟಕದ ಪ್ರಸಿದ್ಧ ಪುಣ್ಯಸ್ಥಳಗಳಲ್ಲಿ ಉಡುಪಿಯ ಶ್ರೀಕೃಷ್ಣ ಮಠ ಕೂಡ ಒಂದು. ದೇಶದ ಬೇರೆ ಬೇರೆ ಭಾಗಗಳಿಂದ ಭಕ್ತರು ಶ್ರೀಕೃಷ್ಣನ ದರ್ಶನಕ್ಕಾಗಿ ಬರುತ್ತಾರೆ. ಶ್ರೀಕೃಷ್ಣ ಜನ್ಮಾಷ್ಠಮಿ ವೇಳೆ ಇಲ್ಲಿ, ಕೃಷ್ಣನಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಇಲ್ಲಿ ನಡೆಸುವ ಮೊಸರು ಕುಡಿಕೆ ಕಾರ್ಯಕ್ರಮವಂತೂ ಪ್ರಸಿದ್ಧವಾಗಿದೆ. ಇಂದು ನಾವು ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ, ಉಡುಪಿ ಮಠಕ್ಕೆ ಶ್ರೀಕೃಷ್ಣ...