ವಾಷಿಂಗ್ಟನ್: ಯುಎಸ್ ಕ್ಯಾಪಿಟಲ್ ದಾಳಿಯ ತನಿಖೆ ನಡೆಸುತ್ತಿರುವ ಕಾಂಗ್ರೆಸ್ ಸಮಿತಿಯು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಸೋಮವಾರ ಶಿಫಾರಸು ಮಾಡಿದೆ. ದಂಗೆಯನ್ನು ಪ್ರಚೋದಿಸುವ, ಅಧಿಕೃತ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವ, ಯುಎಸ್ ಸರ್ಕಾರವನ್ನು ವಂಚಿಸುವ ಪಿತೂರಿ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಟ್ರಂಪ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಹೌಸ್ ಪ್ಯಾನೆಲ್...