ನಾಡಹಬ್ಬ ದಸರಾ ಸಂಭ್ರಮದ ಅಂಗವಾಗಿ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ತುಂತುರು ಮಳೆಯ ನಡುವೆಯೇ ಯುವ ಸಂಭ್ರಮ ಅದ್ಧೂರಿಯಾಗಿ ಜರಗಿತು. ಇದು ಸಾಂಸ್ಕೃತಿಕ ದಸರೆಯ ವೈಭವಕ್ಕೆ ಸುಂದರ ಮುನ್ನುಡಿಯಾಯಿತು.
ಯುವ ಸಮುದಾಯದಿಂದ ಕಂಗೊಳಿಸಿದ್ದ ವೇದಿಕೆಗೆ ಚಲನಚಿತ್ರ ನಟರು ಯುವ ರಾಜ್‌ಕುಮಾರ್ ಮತ್ತು ಅಮೃತಾ ಅಯ್ಯಂಗಾರ್ ಕಾಲಿಟ್ಟ ಕ್ಷಣದಲ್ಲಿ ಶಿಳ್ಳೆ–ಚಪ್ಪಾಳೆಗಳ ಘೋಷಣೆ ಮುಗಿಲು ಮುಟ್ಟಿತು. ವಿವಿಧ ಕಾಲೇಜುಗಳಿಂದ...
ನಾಡಹಬ್ಬ ಮೈಸೂರು ದಸರಾ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಯುವ ಮನಸ್ಸುಗಳ ಸೃಜನಶೀಲತೆಯ ಚಿತ್ತಾರ ಹಾಗೂ ಸಂಭ್ರಮದ ಕ್ಷಣಗಳಿಗೆ ಮಾನಸಗಂಗೋತ್ರಿ ಬಯಲು ರಂಗಮಂದಿರ ಸಜ್ಜುಗೊಂಡಿದೆ.
ಸೆಪ್ಟೆಂಬರ್ 10ರಿಂದ 17ರವರೆಗೆ ಪ್ರತಿದಿನ ಸಂಜೆ 5ರಿಂದ ರಾತ್ರಿ 10ರವರೆಗೆ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಮನರಂಜಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ...