Tuesday, July 1, 2025

Latest Posts

Taj Mahal : ತಾಜ್ ಮಹಲ್ ಸೌಂದರ್ಯಕ್ಕೆ ಕುತ್ತು..! ಅಕ್ರಮವಾಗಿ ತಲೆ ಎತ್ತಿವೆ ಕಟ್ಟಡಗಳು…?!

- Advertisement -

National Story : ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಇಂದಿಗೂ ಪವಿತ್ರ ಪ್ರೀತಿಯ ಸಂಕೇತವಾದ  ತಾಜ್ ಮಹಲ್ ಪ್ರವಾಸಿಗರನ್ನು ತನ್ನ  ಸೌಂದರ್ಯದಲ್ಲೇ ಕೈಬೀಸಿ ಕರೆಯುತ್ತೆ ಆದರೆ ಇದೇ ಸೌಂದರ್ಯಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಹಾಗಿದ್ರೆ ನಮ್ಮ ದೇಶದ ಈ ಅದ್ಭುತ ಸ್ಮಾರಕ ಉಳಿಸೋ ಧ್ವನಿ ಯಾರು ಎತ್ತಿಲ್ಲವಾ ಅಷ್ಟಕ್ಕೂ ಆ  ಸೌಂದರ್ಯ ಶಿಲೆಗೆ ಬಂದಂತಹ ಸಂಕಷ್ಟವಾದ್ರೂ ಏನು ಅಂತೀರಾ ಈ ಸ್ಟೋರಿ ಯಲ್ಲಿದೆ ಕಂಪ್ಲೀಟ್ ಡೀಟೈಲ್ಸ್ …………

ತಾಜ್ ಮಹಲ್ ಮೊಘಲ್  ಸಾಮ್ರಾಜ್ಯದ ಚಕ್ರವರ್ತಿ ಶಹಜಹಾನ್ ತನ್ನ ಪ್ರೀತಿಯ ಮಡದಿಗಾಗಿ  ನಿರ್ಮಿಸಿದ ಸ್ಮಾರಕ ಇದಾಗಿದ್ದು ಮುಮ್ತಾಜ್  ಗೋರಿ ಎಂಬ ಉಲ್ಲೇಖಗಳು ಇತಿಹಾಸದಲ್ಲಿದೆ. ಆದ್ರೆ ಇಂದಿನ ಪೀಳಿಗೆಗೂ ಇದು ಪ್ರೀತಿಯ ಸಂಕೇತವಾಗಿದ್ದರೂ ಈ ಅದ್ಭುತ ಸೌಂದರ್ಯಕ್ಕೆ ಕುತ್ತು ಬಂದಿರೋದೆ ವಿಷಾದದ ಸಂಗತಿ.

ತಾಜ್‌ಮಹಲ್ ಸುತ್ತಮುತ್ತ ಬರೋಬ್ಬರಿ 2,000 ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಲೆಕ್ಕಿಸದೆ ಕಳೆದ 7 ವರ್ಷದಲ್ಲಿ ಈ ಅಕ್ರಮ ಕಟ್ಟಡಗಳ ನಿರ್ಮಾಣವಾಗಿದೆ. ಈ ಅಕ್ರಮ ಕಟ್ಟಡಗಳ ತೆರವಿಗೆ ಭಾರತೀಯ ಪುರಾತತ್ವ ಇಲಾಖೆ ಆದೇಶ ನೀಡಿದರೂ ಸರ್ಕಾರ ಸ್ಪಂದಿಸಿಲ್ಲ ಎಂಬುವುದೇ ಬೇಸರದ ಸಂಗತಿ.

ಕೇಂದ್ರ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ  ತಾಜ್‌ಮಹಲ್ ಸುತ್ತಮುತ್ತ 2,000 ಅಕ್ರಮ ಕಟ್ಟಡ ಪತ್ತೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ತಾಜ್‌ಮಹಲ್ ಸುತ್ತ ಮುತ್ತ ಕನಿಷ್ಠ 500 ಮೀಟರ್ ಅಂತರದಲ್ಲಿ ಯಾವುದೇ ಕಟ್ಟಡ ನಿರ್ಮಾಣ, ಮಣ್ಣು ಅಗೆತ, ಕಾಮಾಗಾರಿಗಳು ನಡೆಸುವಂತಿಲ್ಲ ಎಂಬುವುದು ನಿಯಮ. ಆದರೆ ತಾಜ್‌ಮಹಲ್ ಸುತ್ತಮುತ್ತ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡಗಳು ನಿರ್ಮಾಣವಾಗಿರುವುದನ್ನು ಭಾರತೀಯ ಪುರಾತತ್ವ ಇಲಾಖೆ ಈಗ  ಪತ್ತೆ ಮಾಡಿದೆ.

ತಾಜ್ ಮಹಲ್ ಮ್ಯಾಜಿಕಲ್ ಸೌಂದರ್ಯ ಕಣ್ತುಂಬಿಕೊಳ್ಳಲು ಮೆಹತಾಬ್ ಬಾಗ್‌ಗೆ ಭೇಟಿ ನೀಡಿ ಈಗಾಗಲೇ 500 ಅಕ್ರಮ ಕಟ್ಟಡಗಳ ತೆರವಿಗೆ ಭಾರತೀಯ ಪುರಾತತ್ವ ಇಲಾಖೆ ಆದೇಶ ಕೂಡಾ  ನೀಡಿದೆ. ಇನ್ನುಳಿದ 1,500ಕ್ಕೂ ಹೆಚ್ಚು ಕಟ್ಟಡಗಳ ತೆರವಿಗೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಆದರೆ ತೆರವು ಕಾರ್ಯ ಮಾತ್ರ ಸಾಗುತ್ತಿಲ್ಲ.

ತಾಜ್‌ಮಹಲ್ ಸ್ಮಾರದ 500 ಮೀಟರ್ ಒಳಗಡೆ 249 ಅಕ್ರಮ ಕಟ್ಟಡಗಳು ನಿರ್ಮಾಣವಾಗಿದೆ. ತಾಜ್‌ಮಹಲ್ ಪಕ್ಕದಲ್ಲಿರುವ ಮನೆಗಳು ಇದೀಗ ಉದ್ಯಮಗಳಾಗಿ ಬದಲಾಗಿದೆ. ಹಲವು ಮನೆಗಳನ್ನು ಒಡೆದು ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ. ತಾಜ್‌ಮಹಲ್ ಪ್ರಮುಖ ಪ್ರವಾಸಿ ತಾಣವಾಗಿರುವ ಕಾರಣ ಪ್ರವಾಸಿಗಳಿಗೆ ಹೋಂ ಸ್ಟೇ, ಲಾಡ್ಜ್ ಸೇರಿದಂತೆ ಇತರ ವಾಣಿಜ್ಯ ಉದ್ದೇಶದ ಕಟ್ಟಗಳೇ ಹೆಚ್ಚಿದೆ ಎನ್ನಲಾಗಿದೆ.

ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಸ್ಮಾರಕವನ್ನು ಉಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್, ತಾಜ್‌ಮಹಲ್ ಸುತ್ತಮುತ್ತ ಯಾವುದೇ ಕಟ್ಟಡಗಳ ನಿರ್ಮಾಣ ಮಾಡುವಂತಿಲ್ಲ ಎಂಬುವುದಾಗಿ ಆದೇಶ ನೀಡಿದೆ. ಆದರೆ ಈ ಆದೇಶಗಳನ್ನು ಗಾಳಿಗೆ ತೂರಲಾಗಿದೆ.

ಅಕ್ರಮ ಕಟ್ಟಡ ನಿರ್ಮಾಣ ಕುರಿತು ಪ್ರತಿಕ್ರಿಯೆ ನೀಡಿರುವ ನವನೀತ್ ಸಿಂಗ್ ಚಹಾಲ್, ಈಗಾಗಲೇ ಸಮಿತಿ ರಚಿಸಲಾಗಿದೆ. ಅಕ್ರಮ ಕಟ್ಟಡಗಳ ಪೈಕಿ 25 ಕಟ್ಟಡಗಳನ್ನು ತೆರವು ಮಾಡಲಾಗಿದೆ. 44 ಕಟ್ಟಡಗಳನ್ನು ವಶಕ್ಕೆ ಪಡೆಯಲಾಗಿದೆ. ತೆರವು ಕಾರ್ಯ ಮುಂದುವರಿಯಲಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

Mobile : ಹೊಸ ಮೊಬೈಲ್ ಫುಲ್  ಚಾರ್ಜ್​ ಮಾಡಲು ಹೇಳೋದು ಯಾಕೆ..?!

Chocolate : ಆಯುರ್ವೇದ ಹೆಸರಲ್ಲಿ ಗಾಂಜಾ ಚಾಕಲೇಟ್…! ಮಕ್ಕಳೇ ಇವರ ಟಾರ್ಗೆಟ್ ..?!

Rahul Gandhi : ನಾನು ಕ್ಷಮೆಯಾಚಿಸಲ್ಲ : ರಾಗಾ ಖಡಕ್ ನಿರ್ಧಾರ

- Advertisement -

Latest Posts

Don't Miss