Tuesday, September 16, 2025

Latest Posts

ತಲಕಾಡು ದೇವಾಲಯದ ಚರಿತ್ರೆ..!

- Advertisement -

Temple History:

ಪಕ್ಕದಲ್ಲೇ ಕಾವೇರಿ ನದಿ.. ಆದರೆ ಊರು ಮರುಭೂಮಿಯಂತೆ ಕಾಣುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಊರು ಒಂದು ರಾಣಿಯ ಶಾಪದಿಂದ ಬದಲಾಯಿತು ಎನ್ನಲಾಗುತ್ತದೆ. ತಲಕಾಡು ಬಗ್ಗೆ ತಿಳಿಯಲು ನೀವು ಈ ಸ್ಟೋರಿ ಓದಲೇಬೇಕು.

ಕರ್ನಾಟಕದ ಮೈಸೂರಿನಿಂದ ಕೇವಲ 45 ಕಿ.ಮೀ ದೂರದಲ್ಲಿ ‘ತಲಕಾಡು’ ಎಂಬ ಪುಣ್ಯಕ್ಷೇತ್ರವಿದೆ. ಈ ಪ್ರದೇಶವು ಕ್ರಿ.ಶ.ಮೂರನೆಯ ಶತಮಾನದಿಂದಲೂ ಅನೇಕ ರಾಜರ ರಾಜಧಾನಿಯಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಈ ಪ್ರದೇಶಕ್ಕೆ ತಲಕಾಡು ಎಂಬ ಹೆಸರು ಬಂದಿರುವುದರ ಹಿಂದೆ ಸ್ಥಳೀಯ ಐತಿಹ್ಯವಿದೆ. ಒಮ್ಮೆ ಸೋಮದತ್ತ ಎಂಬ ಋಷಿ ತನ್ನ ಶಿಷ್ಯರೊಂದಿಗೆ ತೀರ್ಥಯಾತ್ರೆಗೆ ಹೊರಟಿದ್ದನು. ಆ ಪ್ರವಾಸದ ಭಾಗವಾಗಿ ಕಾವೇರಿ ದಡದಲ್ಲಿ ಹೋಗುತ್ತಿದ್ದಾಗ ಕಾಡಾನೆಗಳ ದಾಳಿಗೆ ಬಲಿಯಾಗಿದ್ದರು. ಶಿವನ ಭಕ್ತರಾದ ಸೋಮದತ್ತ ಮತ್ತು ಅವನ ಶಿಷ್ಯರು ಕಾಡು ಆನೆಗಳಾಗಿ ಮರುಜನ್ಮ ಪಡೆದರು ಮತ್ತು ಅಲ್ಲಿ ಶಿವನನ್ನು ಪ್ರಾರ್ಥಿಸಿದರು. ಬುರುಗು ಮರದಲ್ಲಿದ್ದ ಪರಮೇಶ್ವರನನ್ನು ನೋಡುತ್ತಾ ಆ ಮರವನ್ನು ಪೂಜಿಸತೊಡಗಿದರು.

ಹೀಗೆ ದಿನಗಳು ಕಳೆಯುತ್ತಿರುವಾ ಹಾಗೆ ತಾಳ ಮತ್ತು ಕಾಡು ಎಂಬ ಇಬ್ಬರು ಕಿರಾತರು ಅಲ್ಲಿಗೆ ಬಂದರು. ಹಚ್ಚ ಹಸಿರಾಗಿ ಕಂಗೊಳಿಸುತ್ತಿರುವ ಆ ಬುರುಗು ಮರವನ್ನು ನೋಡಿ ಅವರಿಗೆ ಅಸೆ ಉದ್ಭವವಾಯಿತು ,ಅವರು ತಕ್ಷಣ ಅದನ್ನು ಕತ್ತರಿಸಲು ಪ್ರಾರಂಭಿಸಿದರು. ಆದರೆ ಕೊಡಲಿ ಮರಕ್ಕೆ ಬಿದ್ದಾಗ ಮರದಿಂದ ರಕ್ತ ಹರಿಯುವುದನ್ನು ಕಂಡು ಅವರು ಆಶ್ಟರ್ಯಕ್ಕೆ ಒಳಗಾದರು. ಆ ಸಮಯದಲ್ಲಿ ಆಕಾಶವಾಣಿ ಒಂದು ಅವರಗೆ ಕೇಳಿಸಿತು, ನಾನು  ಪರಮೇಶ್ವರ ನನ್ನನ್ನು ಪೂಜಿಸುತ್ತಿರುವ ಸೋಮದತ್ತನಿ ಗೋಸ್ಕರ ನಾನು ಬುರುಗು ಮರದಲ್ಲಿ ವಾಸ ಮಾಡುತ್ತಿದ್ದೇನೆ ಎಂದು ಧ್ವನಿ ಹೇಳಿತು. ಆ ಘಟನೆಗೆ ಸಾಕ್ಷಿಯಾಗಿ ನಿಂತಿದ್ದ ತಲೆ, ಕಾಡುಗಳ ಜೋತೆ ಆನೆಗಳ ರೂಪದ ಭಕ್ತರೆಲ್ಲರೂ ಕೈವಲ್ಯವನ್ನು ಸ್ವೀಕರಿಸಿದರು. ಅವರಿಗೆ ಬಂದ ಗಾಯವನ್ನು ಅವರೇ ವಾಸಿಮಾಡಿಕೊಳ್ಳುವ ಶಕ್ತಿಶಾಲಿಯಾಗಿದ್ದುದರಿಂದ ಅಲ್ಲಿ ಬೆಳಗಿದ ಪರಮೇಶ್ವರನನ್ನು ‘ವೈದ್ಯನಾಥ’ ಎಂದು ಕರೆಯುತ್ತಿದ್ದರು. ಕ್ರಮೇಣ ಈ ಸ್ಥಳವನ್ನು ‘ತಲಕಾಡು’ ಎಂದು ಕರೆಯಲಾಯಿತು ಮತ್ತು ಅಲ್ಲಿ ವೈದ್ಯನಾಥರ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಯಿತು.

ತಲಕಾಡು ಅನೇಕ ರಾಜ್ಯಗಳ ರಾಜಧಾನಿಯಾಗಿದ್ದರಿಂದ, ವೈದ್ಯನಾಥನ ದೇವಾಲಯದ ಜೊತೆಗೆ ಇಲ್ಲಿ ನಾಲ್ಕು ಶಿವ ದೇವಾಲಯಗಳನ್ನು ನಿರ್ಮಿಸಲಾಯಿತು. ಈ ಐದು ಶಿವ ದೇವಾಲಯಗಳೆಂದರೆ ಪಾತಾಳೇಶ್ವರ, ಅರ್ಕೇಶ್ವರ, ಮರುಳೇವ್ವರ, ಮಲ್ಲಿಕಾರ್ಜುನ ಮತ್ತು ವೈದ್ಯನಾಥ ದೇವಾಲಯಗಳು. ಈ ಐದು ಶಿವ ದೇವಾಲಯಗಳನ್ನು ಒಟ್ಟಾಗಿ ಪಂಚಲಿಂಗಗಳೆಂದು ಕರೆಯಲಾಗುತ್ತದೆ. ಇವುಗಳ ಜೊತೆಗೆ ಇನ್ನೂ ಅನೇಕ ಭವ್ಯವಾದ ದೇವಾಲಯಗಳು ಈ ತಲಕಾಡಿನಲ್ಲಿವೆ. ರಾಮಾನುಜಾಚಾರ್ಯರು ಕಟ್ಟಿಸಿದರೆಂದು ಹೇಳಲಾದ ‘ಕೀರ್ತಿನಾರಾಯಣ’ ದೇವಾಲಯವು ಅವುಗಳಲ್ಲಿ ಪ್ರಮುಖವಾದುದು.

ಪ್ರಸ್ತುತ, ಈ ಹೆಚ್ಚಿನ ದೇವಾಲಯಗಳು ಮರಳಿನ ದಿಬ್ಬಗಳ ಅಡಿಯಲ್ಲಿ ಹೂತುಹೋಗಿವೆ. ವೈದ್ಯನಾಥ ದೇವಾಲಯದಂತಹ ಕೆಲವು ಕಟ್ಟಡಗಳಿಗೆ ಮಾತ್ರ ಪ್ರವೇಶವಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದರೂ ನದಿಯ ದಡದಲ್ಲಿದ್ದರೂ ಈ ಪ್ರದೇಶ ಈಗ ಮರುಭೂಮಿಯಾಗಿ ಮಾರ್ಪಟ್ಟಿದೆ.

ಶ್ರೀ ಅನಂತ ಪದ್ಮನಾಭಸ್ವಾಮಿ ವ್ರತದ ವಿಶೇಷತೆ. ಭಾಗ -2

ಶ್ರೀ ಅನಂತ ಪದ್ಮನಾಭಸ್ವಾಮಿ ವ್ರತದ ವಿಶೇಷತೆ.. ಭಾಗ- 1

ಶಾಪವನ್ನು ವರವಾಗಿಸಿ ಕೊಂಡು ರಾಮಸೇತು ನಿರ್ಮಿಸಲಾಯಿತಾ..?

- Advertisement -

Latest Posts

Don't Miss