www.karnatakatv.net :ಅಫ್ಘಾನಿಸ್ತಾನವನ್ನ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿರೋ ತಾಲಿಬಾನಿಗರಿಗೆ ಇದೀಗ ಆರ್ಥಿಕ ಮುಗ್ಗಟ್ಟು ಎದುರಾಗಿದೆ.
ವಿವಿಧ ಯೋಜನೆಗಳಡಿ ವಿಶ್ವಬ್ಯಾಂಕ್ ನಿಂದ ಮಂಜೂರಾಗಿದ್ದ ಹಣವನ್ನ ವಾಪಸ್ ತಗೆದುಕೊಳ್ಳಲಾಗಿದೆ. ಉಗ್ರರ ಹಿಡಿತದಿಂದಾಗಿ ದೇಶದ ಸಮಗ್ರ ಅಭಿವೃದ್ಧಿ ಮತ್ತು ಪ್ರಮುಖವಾಗಿ ಮಹಿಳೆಯರ ಆಶೋತ್ತರಗಳಿಗೆ ಧಕ್ಕೆಯಾಗ್ತಿರೋ ಅಂಶವನ್ನು ಸೂಕ್ಷ್ಮವಾಗಿ ಗಮನಿಸ್ತಿರೋ ವಿಶ್ವ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.
ತಾಲಿಬಾನಿಗರ ದಾಳಿ ಹಿನ್ನೆಲೆಯಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ವಿತ್ತೀಯ ನಿಧಿಯಿಂದ ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ಸ್ಥಗಿತಗೊಂಡಿದೆ. ಅಲ್ಲದೆ ಅಮೆರಿಕಾ ಕೂಡ ಸೆಂಟ್ರಲ್ ಬ್ಯಾಂಕ್ ನಲ್ಲಿನ ಆಫ್ಘಾನಿಸ್ತಾನದ ಆಸ್ತಿಯನ್ನೂ ಜಪ್ತಿ ಮಾಡಿದೆ. ಇನ್ನು ಆಫ್ಘಾನಿಸ್ತಾನಕ್ಕೆ ಮಂಜೂರಾಗಿದ್ದ ನಿಧಿಯನ್ನು ತಡೆಹಿಡಿದಿರೋ ವಿಶ್ವ ಬ್ಯಾಂಕ್ , ಆಂತರಿಕ ನಿಯಮಾವಳಿಗಳು ಮತ್ತು ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ ಎಂದಿದೆ. ಅಮೆರಿಕಾ, ಜರ್ಮನಿ, ಭಾರತ ಸೇರಿದಂತೆ ಪ್ರಮುಖ ದೇಶಗಳು ಹಣ ಕಾಸಿನ ವಹಿವಾಟವನ್ನೇ ಸ್ಥಗಿತಗೊಳಿಸಿವೆ. ಇದರಿಂದ ಆಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೀತಿರೋ ತಾಲಿಬಾನಿಗಳು ಹಣ ಸಿಗದೆ ತಬ್ಬಿಬ್ಬಾಗಿದ್ದಾರ. ಇನ್ನು ತಮ್ಮ ಪರ ನಿಂತಿರೋ ಚೀನಾದಿಂದ ಹಣದ ನೆರವಿನ ನಿರೀಕ್ಷೆಯಲ್ಲಿ ತಾಲಿಬಾನಿಗರಿದ್ದಾರೆ.
ಸದ್ಯಕ್ಕೊಂತೂ ತಮ್ಮದೇ ರಾವಣ ರಾಜ್ಯ ಸ್ಥಾಪಿಸಿರೋ ತಾಲಿಬಾನಿಗರು ಹಣ ಸಿಗದೆ ಮುಂದೇನಪ್ಪಾ ಕಥೆ ಅಂತ ಕಂಗಾಲಾಗಿರೋದೊಂತೂ ಸತ್ಯ.