ಪುರುಷರು ಗಡ್ಡ ತೆಗೆಯೋದಕ್ಕೆ ನಿಷೇಧ ಹೇರಿದ ತಾಲಿಬಾನ್..!

www.karnatakatv.net : ಅಫ್ಘಾನಿಸ್ತಾನದಲ್ಲಿ ದಮನಕಾರಿ ನೀತಿ ಅನುಸರಿಸುತ್ತಿರೋ ತಾಲಿಬಾನಿಗಳು ಸದ್ಯ ಪುರುಷರಿಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಿದೆ.  ಆಧುನಿಕ ಕೇಶ ವಿನ್ಯಾಸ, ಶೇವ್ ಅಥವಾ ಟ್ರಿಮ್ ಮಾಡಲೇಬಾರದು ಅಂತ ಪುರುಷರಿಗೆ ಸೂಚನೆ ನೀಡಿದೆ.

ಇನ್ನು ಕಟಿಂಗ್ ಶಾಪ್ ಗಳಲ್ಲಿ ಯಾವುದೇ ಮ್ಯೂಸಿಕ್ ಆಗಲಿ ಶ್ಲೋಕಗಳನ್ನಾಗಲಿ ಹಾಕುವಂತಿಲ್ಲ ಅಂತ ಆದೇಶಿಸಿದೆ.  ಆದ್ರೆ ನಾವು ಬದಲಾಗಿದ್ದೇವೆ ಅಂತ ಹೇಳುತ್ತಿರೋ ತಾಲಿಬಾನಿಗಳು ಮತ್ತೆ  ತಮ್ಮ ಹಳೆಯ ಧೋರಣೆಯನ್ನು ಅನುಸರಿಸೋ ಮೂಲಕ ಅಫ್ಘಾನಿಸ್ತಾನದಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಂದುವರೆಸಿದೆ.

About The Author