Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಸಂಭವಿಸಿದೆ.
ಹೊಡೆದಾಡಿಕೊಂಡ ಇಬ್ಬರನ್ನು ಅರಳಿಕಟ್ಟಿ ಗ್ರಾಮದವರು ಎಂದು ಹೇಳಲಾಗುತ್ತಿದ್ದು, ಸ್ನೇಹಿತರು ಅಂತಾ ತಿಳಿದು ಬಂದಿದೆ. ಇಂದು ರಾತ್ರಿ ಎಂಟು ಗಂಟೆಯ ಸುಮಾರಿಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದ ಪರಿಣಾಮ ಪರಸ್ಪರ ತಲ್ವಾರ್ ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ.
ಹೊಡೆದಾಟದಲ್ಲಿ ಓರ್ವನ ಎರಡೂ ಕೈ ಬೆರಳು ಕಟ್ ಆದ್ರೆ ಇನ್ನೊಬ್ಬನ ಮುಖ ಹಾಗೂ ಕೈಗಳಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಹಾಗೂ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಮುರುಗೇಶ್ ಚೆನ್ನಣ್ಣನವರ ಪರಿಶೀಲನೆ ನಡೆಸಿದ್ದಾರೆ.
ಗಣೇಶ ಹಬ್ಬದ ದಿನವೇ ಈ ಹೊಡೆದಾಟ ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ಯಾವ ಕಾರಣಕ್ಕಾಗಿ ಇವರ ನಡುವೆ ಜಗಳ ನಡೆಯಿತು ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.