ತಮಿಳುನಾಡಲ್ಲಿ ಪಾಲಿಟಿಕ್ಸ್ ಅಂದ್ರೆ ಸಖತ್ ಕಲರ್ಫುಲ್.. ಸಿನಿಮಾ ಫೀಲ್ಡ್ನಿಂದ ಬಂದವ್ರೇ ಅಲ್ಲಿ ರಾಜ್ಯಭಾರ ನಡೆಸ್ತಾರೆ.. ಈಗ ತಮಿಳು ನಟ ದಳಪತಿ ವಿಜಯ್ ಸರದಿ.. ಈಗಾಗ್ಲೇ ಹೊಸ ಪಕ್ಷ ಸ್ಥಾಪಿಸಿದ್ದ ನಟ ವಿಜಯ್, ಇಂದು ಹೊಸ ಬಾವುಟ, ಹಾಗೂ ಪಕ್ಷದ ಗೀತೆಯನ್ನು ಅನಾವರಣಗೊಳಿಸಿದ್ದಾರೆ..
ನಟ ವಿಜಯ್ ಸ್ಥಾಪಿಸಿರೋ ಹೊಸ ಪಕ್ಷದ ಹೆಸರು ತಮಿಳಿಗ ವೆಟ್ರಿ ಕಳಗಂ.. ಈ ಹಿಂದೆ ತಮಿಳು ನಟ ಕಮಲ್ ಹಾಸನ್ ಮಕ್ಕಳ್ ನೀಧಿ ಮಯಂ ಅನ್ನೋ ಪಕ್ಷ ಸ್ಥಾಪಿಸಿದ್ರು.. ತಲೈವಾ ರಜಿನಿಕಾಂತ್ ಕೂಡ ರಾಜಕೀಯ ಪಕ್ಷ ಸ್ಥಾಪಿಸ್ತೀನಿ ಅಂತ ಹೇಳಿ ಹಿಂದೆ ಸರಿದಿದ್ರು.. ಈಗ ದಳಪತಿ ವಿಜಯ್ ಪಕ್ಷ ಸ್ಥಾಪಿಸಿ ಇಂದು ಧ್ವಜವನ್ನೂ ಲಾಂಚ್ ಮಾಡಿದ್ದಾರೆ..
ಟಿವಿಕೆ ಪಕ್ಷದ ಧ್ವಜ ಕೆಂಪು ಹಾಗೂ ಹಳದಿ ಬಣ್ಣವನ್ನ ಹೊಂದಿದೆ. ಮೇಲ್ಭಾಗ ಹಾಗೇ ಕೆಳಭಾಗ ಕೆಂಪು ಬಣ್ಣ ಇದ್ರೆ, ಮಧ್ಯ ಭಾಗದಲ್ಲಿ ಹಳದಿ ಬಣ್ಣ ಇದೆ. ಈ ಹಳದಿ ಪಟ್ಟಿಯಲ್ಲಿ ಎರಡು ಆನೆಗಳು ವಿಜಯದ ಸಂಕೇತವೆಂಬಂತೆ ಸೊಂಡಿಲನ್ನು ಎತ್ತಿರೋದನ್ನ ಚಿತ್ರಿಸಲಾಗಿದೆ. ಮಧ್ಯದಲ್ಲಿ ಅಲ್ಬಿಜಿಯಾ ಲೆಬ್ಬೆಕ್ ಹೆಸರಿನ ಹೂವಿನ ಚಿತ್ರ ಇದೆ.. ತಮಿಳುನಾಡಲ್ಲಿ ಇದನ್ನ ವಾಗೈ ಪುಷ್ಪ ಅಂತ ಕರೀತಾರೆ.. ಅಲ್ಬೆಜಿಯಾ ಲೆಬ್ಬೆಕ್ ಹೂವನ್ನ ನೀವು ಬೆಂಗಳೂರಲ್ಲೂ ನೋಡೇ ಇರ್ತೀರಿ.. ಸಿರಿಸ್ ಅಂತನೂ ಈ ಮರವನ್ನ ಕರೀತಾರೆ.
ವಿಜಯ್ ಅವ್ರ ಧ್ವಜದಲ್ಲಿ ಅಲ್ಬೆಜಿಯಾ ಲೆಬ್ಬೆಕ್ ಫ್ಲವರ್ ಹಾಗೂ ಆನೆಗಳ ವಿಜಯದ ಸಂಕೇತ ಇರೋದು ವಿಶೇಷ.. ಇನ್ನು 2 ವರ್ಷದಲ್ಲಿ ತಮಿಳುನಾಡಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತೆ.. ಈ ಎಲೆಕ್ಷನ್ನಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ದಳಪತಿ ವಿಜಯ್ ಪಾರ್ಟಿ ಸಜ್ಜಾಗಿದೆ. ಈಗಾಗ್ಲೇ ತಮಿಳುನಾಡಲ್ಲಿ ಡಿಎಂಕೆ, ಎಐಎಡಿಎಂಕೆ ಸೇರಿ 108 ಪಾರ್ಟಿಗಳಿವೆ. ವಿಜಯ್ ಅವ್ರ ಟಿವಿಕೆ ಪಾರ್ಟಿ ಎಷ್ಟರ ಮಗೆ ಸೌಂಡ್ ಮಾಡುತ್ತೆ ಕಾದುನೋಡಬೇಕು.