Movie News: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಇರುವುದು ಪತ್ತೆಯಾದ ಬೆನ್ನಲ್ಲೇ, ಈ ಬಗ್ಗೆ ಹಲವು ಚರ್ಚೆಗಳು ಶುರುವಾಗಿದೆ. ಹಲವರು ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ಇದನ್ನು ವಿರೋಧಿಸಿದರೆ, ಮತ್ತೆ ಕೆಲವರು ಈ ಬಗ್ಗೆ ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಇದೇನು ಅಂಥ ದೊಡ್ಡ ತಪ್ಪಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.
ಈ ಮಧ್ಯೆ ತಮಿಳು ನಿರ್ದೇಶಕ ಮೋಹನ್ ಕ್ಷತ್ರಿಯನ್ ಎಂಬುವವರು ಪಳನಿ ದೇವಸ್ಥಾನದ ಪ್ರಸಾದದ ಬಗ್ಗೆ ಹೇಳಿಕೆ ಕೊಟ್ಟ ಕಾರಣ, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪಳನಿ ದೇವಸ್ಥಾನದಲ್ಲಿ ಸಿಗುವ ಪ್ರಸಾದದಲ್ಲಿ ಮಕ್ಕಳಾಗದಂತೆ ಮಾತ್ರೆ ಬೆರೆಸಿ ಕೊಡಲಾಗುತ್ತದೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುವವರೇ ನನಗೆ ಹೇಳಿದ್ದಾರೆ ಎಂದು ಮೋಹನ್ ಹೇಳಿಕೆ ನೀಡಿದ್ದಾರೆ.
ಚೆನ್ನೈನ ತಿರುಚ್ಚಿಯ ಪೊಲೀಸರು, ಮೋಹನ್ ಅವರು ಈ ಹೇಳಿಕೆ ಕೊಟ್‌ಟಿದ್ದಕ್ಕಾಗಿ, ಅವರನ್ನು ಬಂಧಿಸಿದ್ದಾರೆ. ಸದಾ ಹಿಂದೂ ಪರ ಹೇಳಿಕೆ ನೀಡುತ್ತಿದ್ದ ಮೋಹನ್ ಅವರು, ಇಂದು ಯಾರೋ ಹೇಳಿದ ಮಾತನ್ನು ಕೇಳಿ, ಪೇಚಿಗೆ ಸಿಲುಕಿದ್ದಾರೆ. ಇದೀಗ ಮೋಹನ್ ಹೇಳುತ್ತಿರುವುದು ಸತ್ಯವೋ, ಸುಳ್ಳೋ ಎಂದು ತಿಳಿಯಲು, ಪಳನಿ ಪ್ರಸಾದವನ್ನು ಕೂಡ ಪರೀಕ್ಷೆ ಒಳಪಡಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.