ಕೊರೋನಾ ಲಾಕ್ ಡೌನ್ ಬಳಿಕ ಕೇಂದ್ರ ಸರ್ಕಾರ ಕೆಲವು ರೂಲ್ಸ್ ಅಂಡ್ ರೆಗ್ಯುಲೇಶನ್ ಹಾಕಿ ಥಿಯೇಟರ್ ಓಪನ್ ಗೆ ಪರ್ಮಿಷನ್ ಕೊಟ್ಟಿದೆ. ಕೊರೋನಾ ಮುನ್ನೆಚ್ಚರಿಕೆ ಕ್ರಮದೊಂದಿಗೆ 50% ರಷ್ಟು ಸೀಟುಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದ್ರೆ ಸ್ಟಾರ್ ಹೀರೋಗಳ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಗೆ ಮುಂದೆ ಬರ್ತಿಲ್ಲ. ಜನ ಥಿಯೇಟರ್ ಗೆ ಬರ್ತಾರೋ ಇಲ್ವೋ..? ಬಂದ್ರು 50% ಆಸನಗಳ ವ್ಯವಸ್ಥೆ ಇರೋದ್ರಿಂದ ಸಿನಿಮಾ ಅಷ್ಟಾಗಿ ಸಕ್ಸಸ್ ಕಾಣೋದಿಲ್ಲ ಅನ್ನೋ ಆಧಾರ ಮೇಲೆ ಸ್ಟಾರ್ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡ್ತಿಲ್ಲ.

ಆದ್ರೆ ಈ ನಡುವೆಯೇ ಫರ್ ದ ಫಸ್ಟ್ ಟೈಮ್ ಸಿನಿಮಾ ಥಿಯೇಟರ್ ನಲ್ಲಿ 100% ಆಸನಗಳ ಭರ್ತಿಗೆ ತಮಿಳುನಾಡು ಸರ್ಕಾರ ಅವಕಾಶ ನೀಡಿದೆ. ಆದ್ರೆ ಈ ನಿರ್ಧಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಅಸಮಾಧಾನ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ಆಗ್ತಿದ್ದಂತೆ ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ತಮ್ಮ ಆದೇಶವನ್ನು ಪರಿಶೀಲಿಸುವಂತೆ ತಿಳಿಸಿತ್ತು. ಗೃಹ ಕಾರ್ಯದರ್ಶಿ ಈ ಬಗ್ಗೆ ಪತ್ರ ಬರೆದು ಬರೆದಿದ್ದರು.

ಈ ಮಧ್ಯೆ ಮದ್ರಾಸ್ ಹೈ ಕೋರ್ಟ್‌ನಲ್ಲಿ ಆದೇಶ ಹಿಂಪಡೆಯುವಂತೆ ಆಕ್ಷೇಪಣೆ ಅರ್ಜಿ ಸಹ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವೂ ಸಹ ಜನವರಿ
11ರವರೆಗೂ ಕೇವಲ 50 ಪರ್ಸೆಂಟ್‌ಗೆ ಮಾತ್ರ ಅವಕಾಶ ನೀಡಿದೆ. ಈ ಎಲ್ಲಾ ಬೆಳವಣಿಗೆ ಗಮನಿಸಿದ ತಮಿಳುನಾಡು
ಸರ್ಕಾರ ಇದೀಗ ತನ್ನ ನಿರ್ಧಾರವನ್ನು ಹಿಂಪಡೆದುಕೊಂಡಿದೆ.