ಕರ್ನಾಟಕ ಟಿವಿ : ತಮಿಳುನಾಡಿನಲ್ಲಿ ಕಳೆದ 10 ದಿನಗಳ ಹಿಂದೆ ಎರಡ್ಮೂರು ಜಿಲ್ಲೆ ರೆಡ್ ಝೋನ್ ಇತ್ತು. 3 ಸಾವಿರ ಸೋಂಕಿರಲ್ಲಿ 50% ಗಿಂತ ಹೆಚ್ಚು ಸೋಂಕಿತರು ಗುಣಮುಖರಾಗಿದ್ರು. ಸೋಂಕಿತರಿಗೆ ಹೋಲಿಸಿದ್ರೆ ಸಾವಿನ ಪ್ರಮಾಣ ದೇಶದಲ್ಲಿಯೇ ಕಡಿಮೆ ಇತ್ತು.. ಕಳೆದ 10 ದಿನಗಳ ಹಿಂದೆ ಚೆನ್ನೈನ ಕೊಯಂಬೇಡು ಮಾರ್ಕೆಟ್ ನಲ್ಲಿ ಸ್ಪೋಟವಾದ ಕೊರೊನಾ ಸುನಾಮಿ 3 ಸಾವಿರದಲ್ಲಿದ್ದ ಸೋಂಕಿತರ ಸಂಖ್ಯೆಯನ್ನ 8 ಸಾವಿರಕ್ಕೆ ತಂದು ನಿಲ್ಲಿಸಿದೆ. ಅಲ್ಲದೇ 8 ಸ್ಥಾನದಲ್ಲಿದ್ದ ತಮಿಳುನಾಡು ಸೋಂಕಿತರ ಪಟ್ಟಿಯಲ್ಲಿ ಮೂರನೆ ಸ್ಥಾನಕ್ಕೆ ಜಿಗಿದಿದೆ. ಎಚ್ಚುಕಮ್ಮಿ ಇನ್ನೆರಡು ದಿನದಲ್ಲಿ ಗುಜರಾತ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಮಿಳುನಾಡು ಹೋಗುವ ಸಾಧ್ಯತೆ ಇದೆ.ಕಳೆದ 10 ದಿನಗಳಿಂದ ದಿನಕ್ಕೆ ಸರಾಸರಿ 600 – 700 ಸೋಂಕಿತರು ಪತ್ತೆಯಾಗ್ತಿರೋದು ತಮಿಳುನಾಡನ್ನ ಕಂಗೆಡಿಸಿದೆ. ಮಹಾರಾಷ್ಟ್ರ 23 ಸೋಂಕಿತರ ಕಾರಣ ಮೊದಲ ಸ್ಥಾನದಲ್ಲಿದ್ರೆ ಗುಜರಾತ್ 8,542 ಸೊಂಕಿತರು ಪತ್ತೆಯಾಗಿ ಎರಡನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 8002 ಸೋಂಕಿತರಿದ್ದು ಮೂರನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ 7233 ಸೋಂಕಿತರಿದ್ದು ನಾಲ್ಕನೇ ಸ್ಥಾನದಲ್ಲಿದೆ..
ನ್ಯೂಸ್ ಡೆಸ್ಕ್ ಕರ್ನಾಟಕ ಟಿವಿ